ಬೆಂಗಳೂರು: ಹೊಸ ಸಂಭ್ರಮಾಚರಣೆಯ ಸಂದರ್ಭದಲ್ಲಿ ಯುವತಿ ಜೊತೆ ಅಸಭ್ಯ ವರ್ತನೆ ತೋರಿದ್ದು, ಕೇಳಲು ಹೋದ ಯುವತಿ ಗೆಳೆಯನ ಮೇಲೂ ಹಲ್ಲೆ ಮಾಡಲಾಗಿದೆ. ಕೋರಮಂಗಲ 5ನೇ ಬ್ಲಾಕ್ನ ಮ್ಯಾಡ್ ಸೈನಟಿಸ್ಟ್ ಪಬ್ ಬಳಿ ಈ ಘಟನೆ ನಡೆದಿದ್ದು, ಯುವಕನಿಗೆ ಮುಖದ ಮೇಲೆ ಗಂಭೀರ ಗಾಯಗಳಾಗಿವೆ.
ಹೊಸ ವರ್ಷ ಸಂಭ್ರಮಾಚರಣೆಯಲ್ಲಿ ಯುವತಿಯೊಂದಿಗೆ ಪುಂಡರ ಕಿರಿಕ್,ಗೆಳೆಯನ ಮೇಲೂ ಹಲ್ಲೆ - attack on a boy in New Year's Eve
ಹೊಸ ಸಂಭ್ರಮಾಚರಣೆಯ ಸಂದರ್ಭದಲ್ಲಿ ಯುವತಿ ಜೊತೆ ಅಸಭ್ಯ ವರ್ತನೆ ತೋರಿದ್ದು, ಕೇಳಲು ಹೋದ ಯುವತಿಯ ಗೆಳೆಯನ ಮೇಲೆ ಹಲ್ಲೆ ಮಾಡಲಾಗಿದೆ.
ಹಲ್ಲೆಗೊಳಗಾದ ಯುವಕ
ಹೊಸ ವರ್ಷಾಚರಣೆಗೆ ಹೋದ ಸಂದರ್ಭದಲ್ಲಿ ನೆರೆದಿದ್ದ ಕೆಲ ಪುಂಡ ಯುವಕರು, ಯುವತಿ ಜೊತೆ ಅಸಭ್ಯ ವರ್ತನೆ ತೋರಿದ್ದಾರೆ. ಈ ವೇಳೆ ಯುವತಿಯ ಜೊತೆಯಿದ್ದ ಗೆಳೆಯ ಅದನ್ನು ಕೇಳಲು ಮುಂದಾಗಿದ್ದು, ಆತನ ಮೇಲೆ ನಾಲ್ಕು ಜನ ಅಪರಿಚಿತರು ಏಕಾಏಕಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತು ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಐಪಿಸಿ ಸೆಕ್ಷನ್ 323, 341 ಅಡಿಯಲ್ಲಿ ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗಾಗಿ ಶೋಧ ನಡೆಸಿದ್ದಾರೆ.