ಬೆಂಗಳೂರು :ರಾಜಧಾನಿ ಬೆಂಗಳೂರಿನಲ್ಲಿ ಮೊನ್ನೆ ಸುರಿದ ಭಾರಿ ಮಳೆಗೆ ಹೆಚ್ಎಸ್ಆರ್ ಲೇಔಟ್ನಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಗ್ಯಾಲರಿ ಧರೆಗುರುಳಿತ್ತು. ಈ ಕ್ರೀಡಾಂಗಣವನ್ನು ಕಳೆದ ಮಾರ್ಚ್ 1ರಂದು ಸಿಎಂ ಬಸವರಾಜ್ ಬೊಮ್ಮಾಯಿ ಲೋಕಾರ್ಪಣೆ ಮಾಡಿದ್ದರು. ಆದರೆ, ಭಾನುವಾರ ಸಂಜೆ ವೇಳೆಗೆ ಬೀಸಿದ ಬಿರುಗಾಳಿ ಮಳೆಗೆ ಒಂದು ಗ್ಯಾಲರಿ ಮರಗಳಲ್ಲಿ ಸಿಲುಕ್ಕಿದ್ದರೇ, ಮತ್ತೊಂದು ಗ್ಯಾಲರಿ ಧರೆಗುರುಳಿತ್ತು.
ಕಳಪೆ ಕಾಮಗಾರಿಯಿಂದಾಗಿ ನಾಲ್ಕು ಕೋಟಿ ರೂ.ಗಳಲ್ಲಿ ನಿರ್ಮಾಣಗೊಂಡಿದ್ದ ಒಳಾಂಗಣ ಕ್ರೀಡಾಂಗಣ ಇದಾಗಿದ್ದು, ಗ್ಯಾಲರಿ ಹಿಂಭಾಗದಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೂ ಕಬ್ಬಿಣದ ಸರಳುಗಳು ಬಿದ್ದಿವೆ. ಗ್ರಾನೈಟ್ ಸಮೇತ ಸ್ಲ್ಯಾಬ್ಗಳು ಕಿತ್ತೋಗಿದೆ. ಎರಡೇ ತಿಂಗಳಲ್ಲಿ 4 ಕೋಟಿ ರೂ. ಕಾಮಗಾರಿ ನೆಲಸಮವಾಗಿದೆ.
ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಹೆಚ್ಎಸ್ಆರ್ ಲೇಔಟ್ನಲ್ಲಿ ಕ್ರೀಡಾಂಗಣವು ಮಳೆ ಮತ್ತು ರಭಸವಾದ ಗಾಳಿಯಿಂದಾಗಿ ಬಿದ್ದಿದೆ. ಗುತ್ತಿಗೆದಾರರೇ ಅದನ್ನ ಮರು ನಿರ್ಮಾಣ ಮಾಡಬೇಕಿದೆ. ಗುತ್ತಿಗೆದಾರ ಯಾರು ಎಂದು ಗೊತ್ತಿಲ್ಲ. ಹೀಗಾಗಿ, ಈ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕಲಾಗುತ್ತದೆ. ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಅಂತಾ ತಿಳಿಸಿದ್ದಾರೆ.
ಗಾಳಿ-ಮಳೆ ರಭಸಕ್ಕೆ ಬಿದ್ದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಎರಡು ಗ್ಯಾಲರಿ.. ಇನ್ನು ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾಹಿತಿ ನೀಡಿದ್ದು, ಗಾಳಿಯ ವೇಗ ಹೆಚ್ಚಿದ್ದ ಕಾರಣ ಈ ಘಟನೆ ನಡೆದಿದೆ. ನಾಲ್ಕು ಗ್ಯಾಲರಿಯಲ್ಲಿ ಎರಡು ಗ್ಯಾಲರಿ ಮಾತ್ರ ಕುಸಿದಿವೆ. ನಾಲ್ಕು ಕೋಟಿ ವೆಚ್ಚದಲ್ಲಿ ಕಾಮಗಾರಿ ಮಾಡಲಾಗಿತ್ತು. ಈ ಗ್ಯಾಲರಿಗೆ ₹25 ಲಕ್ಷ ಖರ್ಚು ಮಾಡಲಾಗಿತ್ತು.
ಇದನ್ನ ಮತ್ತೆ ಗುತ್ತಿಗೆದಾರರಿಂದಲೇ ನಿರ್ಮಿಸುವ ಕೆಲಸ ಮಾಡುತ್ತೇವೆ. ಯಾವುದೇ ರೀತಿ ಬಿಬಿಎಂಪಿ ಸರ್ಕಾರಕ್ಕೆ ಹೊರಯಾಗದ ರೀತಿ ನೋಡಿಕೊಳ್ತೇವೆ. ಇನ್ನೂ 15 ರಿಂದ 25 ದಿನದೊಳಗೆ ಎಲ್ಲಾ ಕಾಮಗಾರಿ ಮುಗಿಸುತ್ತೇವೆ. ಅಧಿಕಾರಿಗಳ ಜೊತೆ ಸಭೆ ಮಾಡಿ ಸೂಚನೆ ಕೂಡ ನೀಡಿದ್ದೇವೆ. ಇದು ಕಳಪೆ ಕಾಮಗಾರಿ ಇಂದ ಆಗಿಲ್ಲ, ನಾವು ಯಾವುದೇ ರೀತಿ ಕ್ವಾಲಿಟಿಯಲ್ಲಿ ಕಾಂಪ್ರಮೈಸ್ ಆಗಿಲ್ಲ. ಬಿರುಗಾಳಿ ಇದ್ದಿದ್ರಿಂದ ಈ ಘಟನೆ ನಡೆದಿದೆ ಎಂದು ಹೇಳಿದರು.