ಬೆಂಗಳೂರು:ರಾಜ್ಯದಲ್ಲಿ ನಿಧಾನವಾಗಿ ಚಳಿಗಾಲ ಆರಂಭವಾಗಿದ್ದು, ಅಸ್ತಮಾ ರೋಗಿಗಳು ಕೊಂಚ ಎಚ್ಚರಿಕೆಯಿಂದ ಇರುವುದು ಅಗತ್ಯ. ಚಳಿಗಾಲದಲ್ಲಿ ಆರೋಗ್ಯ ಶೀತ, ನೆಗಡಿ, ಜ್ವರದಂತಹ ಕಾಯಿಲೆಗಳು ಆಗಾಗ ಕಾಣಿಸಿಕೊಳ್ಳುತ್ತವೆ. ಹೀಗಿರುವಾಗ ನೀವು ನಿಮ್ಮ ಆರೋಗ್ಯದ ಬಗ್ಗೆ ಗಮನವಹಿಸಬೇಕಿದೆ.
ವೈದ್ಯೋಪಚಾರದ ಹೊರತಾಗಿಯೂ, ಅಸ್ತಮಾ ರೋಗಿಗಳು ತಮ್ಮದೇ ಆದ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ. ಅಸ್ತಮಾ ಇದೊಂದು ಅಪಾಯಕಾರಿ ಕಾಯಿಲೆ. ಸಾಮಾನ್ಯವಾಗಿ ಗಾಳಿಯಿಂದ ಬರಬಹುದಾದಂತಹ ಒಂದು ಕಾಯಿಲೆಯಾಗಿದ್ದು, ಪ್ರತಿದಿನ ಸುಮಾರು 40 ರೋಗಿಗಳು ಅಸ್ತಮಾ, ಉಸಿರಾಟದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ಹೇಳುತ್ತಾರೆ.
ಶೇ.60 ರಷ್ಟು ಪುರುಷರಲ್ಲಿಯೇ ಹೆಚ್ಚಾಗಿ ಇದು ಕಂಡು ಬರುತ್ತದೆ. ಈ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. (ಪ್ರತಿ ತಿಂಗಳು 25 ರಿಂದ 30 ಮಕ್ಕಳಲ್ಲೂ ಕೂಡಾ ಅಸ್ತಮಾದಿಂದ ಬಳಲುತ್ತಿದ್ದಾರೆ). ಕಳೆದ ವರ್ಷಕ್ಕೆ ಹೋಲಿಸಿದ್ದರೆ ಈ ಬಾರಿ ಶೇ.5 ರಷ್ಟು ಹೆಚ್ಚಿನ ಜನರು ಅಸ್ತಮಾದಿಂದ ನರಳುತ್ತಿದ್ದಾರೆ.
ಅಪೋಲೋ ಆಸ್ಪತ್ರೆಯ ಮುಖ್ಯಸ್ಥ ಡಾ. ಗೋವಿಂದಯ್ಯ ಯತೀಶ್ ದೀರ್ಘಕಾಲಿಕ ರೋಗ:ಅಸ್ತಮಾ ಶ್ವಾಸಕೋಶಗಳಿಗೆ ಸಂಬಂಧಿಸಿದ ದೀರ್ಘಕಾಲಿಕ ರೋಗ. ಮುಖ್ಯವಾಗಿ ರೋಗಿಯ ಉಸಿರಾಟದ ಪ್ರಕ್ರಿಯೆ ಮೇಲೆ ತೊಂದರೆಯನ್ನುಂಟು ಮಾಡುತ್ತದೆ. ರೋಗದ ತೀವ್ರತೆ ಮತ್ತು ಕೆರಳುವಿಕೆ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದೆ.
ಅಸ್ತಮಾ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲಾಗದಿದ್ದರೂ, ನಿರಂತರವಾದ ಚಿಕಿತ್ಸೆ, ಸೂಕ್ತ ವೈದ್ಯಕೀಯ ಮಾರ್ಗದರ್ಶನ ಮತ್ತು ಜೀವನ ಶೈಲಿಯನ್ನು ಮಾರ್ಪಾಡು ಮಾಡಿ ರೋಗವನ್ನು ಖಂಡಿತವಾಗಿಯೂ ನಿಯಂತ್ರಣವಾಗಿಟ್ಟುಕೊಳ್ಳಬಹುದು ಎನ್ನುತ್ತಾರೆ ವೈದ್ಯರು.
ಅಪೋಲೋ ಆಸ್ಪತ್ರೆಯ ಮುಖ್ಯಸ್ಥ ಡಾ. ಗೋವಿಂದಯ್ಯ ಯತೀಶ್ ಪ್ರಕಾರ,
- ಆರೋಗ್ಯದ ಬಗ್ಗೆ ಜಾಗೃತಿ ಅಗತ್ಯ.
- ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು.
- ವ್ಯಾಯಾಮ ಹಾಗೂ ಪ್ರಾಣಾಯಾಮ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು.
- ಶ್ವಾಸಕೋಶದ ಆರೋಗ್ಯಕ್ಕೆ ವಿಶೇಷ ಗಮನ ಹರಿಸಬೇಕು.
- ಚಳಿಗಾಲದಲ್ಲಿ ವೈರಸ್ಗಳು ಹೆಚ್ಚಾಗಿ ಅಭಿವೃದ್ಧಿಯಾಗುತ್ತವೆ. ಇತರೆ ವಿಧದ ವೈರಸ್ಗಳ ಪ್ರಭಾವ ಸಹ ಶರೀರದ ಮೇಲೆ ಉಂಟಾಗಬಹುದು. ಇದನ್ನು ಗಮಲದಲ್ಲಿಟ್ಟುಕೊಂಡು ಉತ್ತಮ ಗಾಳಿಯನ್ನು ಸೇವಿಸಿ.
- ಕೋವಿಡ್ ವ್ಯಾಕ್ಸಿನೇಷನ್ ತಪ್ಪದೆ ಹಾಕಿಸಿಕೊಳ್ಳಿ. ಇದರಿಂದ ಸಾಕಷ್ಟು ಸೋಂಕು ತಡೆಯಾಗಲಿದೆ.
- ವ್ಯಾಯಾಮ ಮಾಡುವುದರಿಂದ ಶ್ವಾಸಕೋಶಗಳು ವಿಕಸನಗೊಂಡು ಉಸಿರಾಟಕ್ಕೆ ಅನುಕೂಲ ಮಾಡಿಕೊಡಲಿದೆ.
- ಧ್ಯಾನ ಮಾಡುವ ಮೂಲಕವೂ ಆರೋಗ್ಯ ಕಾಪಾಡಿಕೊಳ್ಳಬಹುದು.
- ಇನ್ಹೇಲರ್ ಅನ್ನು ಯಾವಾಗಲೂ ನಿಮ್ಮ ಜೊತೆಯೇ ಇಟ್ಟುಕೊಳ್ಳಿ
- ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದರೆ ನಿಮ್ಮ ವೈದ್ಯರಲ್ಲಿ ಸಲಹೆ ಪಡೆಯಿರಿ ಎಂದು ಡಾ. ಗೋವಿಂದಯ್ಯ ಸಲಹೆ ನೀಡಿದ್ದಾರೆ.
ಇದನ್ನೂ ಓದಿ:ಶ್ವಾಸಕೋಶ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಇಲ್ಲದೇ ಪರಿಹಾರ; ದೇಶದಲ್ಲಿ ಹೈದರಾಬಾದ್ ಬಳಿಕ ಬೆಂಗಳೂರಿಗೆ ಪರಿಚಯ