ಬೆಂಗಳೂರು: ಕೋವಿಡ್ ರೋಗಿಗಳಿಗೆ ಸತತವಾಗಿ ಚಿಕಿತ್ಸೆ ನೀಡುತ್ತಿದ್ದ ಡಾ. ಸನತ್ ಎಂಬವರು ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದರು. ಇವರಿಗೆ ಯಶಸ್ವಿಯಾಗಿ ಆಸ್ಟರ್ ಆಸ್ಪತ್ರೆ ವೈದ್ಯರು ಶ್ವಾಸಕೋಶದ ಕಸಿ ಮಾಡುವ ಮೂಲಕ ಮರುಜೀವ ನೀಡಿದ್ದಾರೆ.
ಡಾ. ಸನತ್ ಕೋವಿಡ್ ರೋಗಿಗಳಿಗೆ ಸತತವಾಗಿ ವೈದ್ಯಕೀಯ ಸೇವೆ ನೀಡುತ್ತಿದ್ದರು. ಪರಿಣಾಮ ಸ್ವತಃ ಕೋವಿಡ್ ಸೋಂಕಿಗೆ ಒಳಗಾಗಿ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ವೆಂಟಿಲೇಟರ್ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಇವರ ಆರೋಗ್ಯ ದಿನೇದಿನೇ ಹದಗೆಡತೊಡಗಿತು.
ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಟರ್ ಆಸ್ಪತ್ರೆಗೆ ಡಾ.ಸನತ್ ಅವರನ್ನು ದಾಖಲಿಸಿ ಆಮ್ಲಜನಕ ಬೆಂಬಲದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೂ ಚೇತರಿಸಿಕೊಂಡಿರಲಿಲ್ಲ. ಬಳಿಕ ಶ್ವಾಸಕೋಶ ಕಸಿ ಮಾಡುವ ಅನಿವಾರ್ಯತೆ ಎದುರಾಗಿ ಸೂಕ್ತ ದಾನಿಗಳಿಗಾಗಿ ಕಾಯ್ದು ಜೂನ್ 23, 2021 ರಂದು ಕಸಿ ಮಾಡಲಾಗಿದೆ.