ಕರ್ನಾಟಕ

karnataka

ETV Bharat / state

ಸಹಾಯವಾಣಿ ನಂಬರ್ ಅಂದುಕೊಂಡು ಗೋಪಾಲಯ್ಯ ಮೊಬೈಲ್​ಗೆ ದಿನಕ್ಕೆ ನೂರಾರು ಕರೆ! - Minister Gopalya

ಕೋವಿಡ್-19ನಿಂದ ರಾಜ್ಯದ ಜನರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಇದಕ್ಕಾಗಿ ಸರ್ಕಾರ ಕುಂದು-ಕೊರತೆಗಳನ್ನು ಆಲಿಸಲು ಸಹಾಯವಾಣಿಗಳನ್ನು ಪ್ರಾರಂಭಿಸಿದೆ. ಆದರೆ ಸಹಾಯವಾಣಿ ನಂಬರ್ ಅಂದುಕೊಂಡು ಸಚಿವ ಗೋಪಾಲಯ್ಯ ಮೊಬೈಲ್​ಗೆ ಅಸಂಖ್ಯಾತ ಕರೆಗಳು ಬರುತ್ತಿವೆ ಎಂದು ತಿಳಿದು ಬಂದಿದೆ.

Assuming the helpline number
ಸಹಾಯವಾಣಿ ನಂಬರ್ ಅಂದುಕೊಂಡು ಗೋಪಾಲಯ್ಯ ಮೊಬೈಲ್​ಗೆ ಕರೆ

By

Published : May 3, 2020, 11:03 PM IST

Updated : May 3, 2020, 11:14 PM IST

ಬೆಂಗಳೂರು:ಸಚಿವ ಗೋಪಾಲಯ್ಯ ಅವರ ಮೊಬೈಲ್ ನಂಬರ್​ಗೆ ನಿತ್ಯ 500-600 ಕರೆಗಳು ಬರುತ್ತಿವೆ. ನಮ್ಮ ಏರಿಯಾಗೆ ಇನ್ನೂ ಆಹಾರ ಕಿಟ್ ಸಪ್ಲೈ ಆಗಿಲ್ಲ. ಬೇಗ ಕಳಿಸಿಕೊಡಿ. ಈ ನಂಬರ್​ಗೆ ಕರೆ ಮಾಡಿದರೆ ಆಹಾರ ಪದಾರ್ಥ ಕಳಿಸಿಕೊಡ್ತೀರಂತಲ್ಲ. ಹೀಗೆ ಹತ್ತು ಹಲವು ಅಹವಾಲು ಹೇಳಿ ಗೋಪಾಲಯ್ಯ ಅವರ ಮೊಬೈಲ್​ಗೆ ಅಸಂಖ್ಯಾತ ಕರೆಗಳು ಬರುತ್ತಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನ ಮೊಬೈಲ್ ಸಂಖ್ಯೆ ಅದು ಹೇಗೋ ವಾಟ್ಸಪ್​​ಗಳಲ್ಲಿ ಹರಿದಾಡಿದ್ದು, ಅದನ್ನು ಸಹಾಯವಾಣಿ ಕರೆ ಅಂದುಕೊಂಡು ದಿನ ನೂರಾರು ಮಂದಿ ತಮ್ಮ ಕುಂದು ಕೊರತೆ ಹೇಳಿ ಕರೆ ಮಾಡುತ್ತಿದ್ದಾರೆ. ಪ್ರತಿ ನಿಮಿಷಕ್ಕೊಂದರಂತೆ ಕರೆಗಳು ಬರುತ್ತವೆ. ಕರೆ ಮಾಡಿ ನಮಗೆ ಬೇಗ ಆಹಾರ ಪದಾರ್ಥ ಕಳಿಸಿ ಕೊಡ್ರಿ ಅಂತಾ ಕೇಳ್ತಾರೆ. ಕರೆ ಮಾಡುವವರಿಗೆ ನಾನು ಮಂತ್ರಿ ಅನ್ನೋದು ಗೊತ್ತೇ ಇಲ್ಲ. ಯಾವುದೋ ಸಹಾಯವಾಣಿ ಸಂಖ್ಯೆ ಅಂದುಕೊಂಡು ಮಾತನಾಡುತ್ತಾರೆ. ಸಾಧ್ಯವಾದಷ್ಟು ಕರೆಗಳನ್ನು ಸ್ವೀಕರಿಸಿ ಅವರ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತೇನೆ. ಇಲ್ಲ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಮೊದಲಿಗೆ ನಿತ್ಯ 600ಕ್ಕೂ ಹೆಚ್ಚು ಕರೆಗಳು ಬರುತ್ತಿದ್ದು, ಈಗ ಅದು ಸ್ವಲ್ಪ ಕಡಿಮೆಯಾಗಿದೆ. ಕಳೆದ ಒಂದು ವಾರದಿಂದ ಸಚಿವರ ಮೊಬೈಲ್​ಗೆ ನಿತ್ಯ 300 ಕರೆಗಳು ಬರುತ್ತಿವೆ ಎಂದು ತಿಳಿದು ಬಂದಿದೆ.

Last Updated : May 3, 2020, 11:14 PM IST

ABOUT THE AUTHOR

...view details