ಬೆಂಗಳೂರು:ನಟಿ ರಾಗಿಣಿ ಅವರ ಆಪ್ತ ರವಿಶಂಕರ್ನನ್ನು ನಿನ್ನೆ ವಿಚಾರಣೆಗೆ ಒಳಪಡಿಸಿ, ಇಂದು ಬಂಧಿಸಿದ್ದೇವೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಸ್ಯಾಂಡಲ್ವುಡ್ ಡ್ರಗ್ ಮಾಫಿಯಾ ಕುರಿತು ಸಿಸಿಬಿಯಲ್ಲಿ ವಿಚಾರಣೆ ಚುರುಕುಗೊಂಡಿದ್ದು, ಈ ಬಗ್ಗೆ ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ. ಡ್ರಗ್ ಪ್ರಕರಣ ಸಂಬಂಧ ನಗರದಾದ್ಯಂತ ಶೋಧ ಕಾರ್ಯ ಮಾಡಲಾಗುತ್ತಿದೆ. ಸದ್ಯ ನಗರದಾದ್ಯಂತ ಡ್ರಗ್ಸ್ ಜಾಲ ಪತ್ತೆಗೆ ಮುಂದಾಗಿದ್ದೇವೆ. ಸ್ಯಾಂಡಲ್ವುಡ್ನಲ್ಲಿ ಡ್ರಗ್ ವಿಚಾರ ಸಂಬಂಧ ನಿರ್ಮಾಪಕ ಇಂದ್ರಜಿತ್ ಲಂಕೇಶ್ ಕೆಲ ಸಾಕ್ಷ್ಯಗಳನ್ನು ಕೊಡುತ್ತೇನೆ ಎಂದಿದ್ದರು. ಸದ್ಯ ಇಂದು ಎರಡನೇ ಬಾರಿ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗಿದ್ದಾರೆ. ಇಂದ್ರಜಿತ್ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದೇವೆ ಎಂದರು.