ಕರ್ನಾಟಕ

karnataka

ETV Bharat / state

ಮುಜರಾಯಿ ಇಲಾಖೆಗೆ ಸೇರಿದ ಹಣ ಅಕ್ರಮ ವರ್ಗಾವಣೆ: ಸಹಾಯಕ ಆಯುಕ್ತ ಬಂಧನ - ಬೆಂಗಳೂರು ನಗರಸಭಾ ವಲಯದ ಸಹಾಯಕ ಆಯುಕ್ತ ಬಂಧನ

ಮುಜರಾಯಿ ಇಲಾಖೆಯ ತಹಶೀಲ್ದಾರ್ ಅರವಿಂದ ಪ್ರಸಾದ್ ನೀಡಿದ ದೂರಿನ ಮೇರೆಗೆ ಸಹಾಯಕ ಆಯುಕ್ತರಾಗಿದ್ದ ವೆಂಕಟರಮಣ ಗುರುಪ್ರಸಾದ್ ಎಂಬವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಮುಜರಾಯಿ ಇಲಾಖೆಗೆ ಸೇರಿದ ಹಣದ ಅಕ್ರಮ ವರ್ಗಾವಣೆ ಆರೋಪ: ಸಹಾಯಕ ಆಯುಕ್ತ ಬಂಧನ
ಮುಜರಾಯಿ ಇಲಾಖೆಗೆ ಸೇರಿದ ಹಣದ ಅಕ್ರಮ ವರ್ಗಾವಣೆ ಆರೋಪ: ಸಹಾಯಕ ಆಯುಕ್ತ ಬಂಧನ

By

Published : Apr 14, 2022, 8:20 PM IST

ಬೆಂಗಳೂರು: ಕಾನೂನುಬಾಹಿರವಾಗಿ ಮುಜರಾಯಿ ಇಲಾಖೆಗೆ ಸೇರಿದ 25.50 ಲಕ್ಷ ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದಡಿ ಇಲಾಖೆಯ ನಗರಸಭಾ ವಲಯದ ಸಹಾಯಕ ಆಯುಕ್ತನನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ‌. ತಹಶೀಲ್ದಾರ್ ಅರವಿಂದ ಪ್ರಸಾದ್ ನೀಡಿದ ದೂರಿನ ಮೇರೆಗೆ ಸಹಾಯಕ ಆಯುಕ್ತರಾಗಿದ್ದ ವೆಂಕಟರಮಣ ಗುರುಪ್ರಸಾದ್ ಎಂಬವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ಸಚಿವ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಕೆ.ಎಸ್‌.ಈಶ್ವರಪ್ಪ

ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ‌ ಸಿಬ್ಬಂದಿಯಿಂದ 10 ಗ್ರಾಂ ಚಿನ್ನ ತೆಗೆದುಕೊಂ0ಡು ವಾಪಸ್ ನೀಡಿಲ್ಲ ಎನ್ನುವ ಆರೋಪವೂ ಇವರ ಮೇಲಿದೆ. ಈ ಸಂಬಂಧ ವಿಧಾನಸೌಧ ಪೊಲೀಸರಿಗೆ ದೂರು ನೀಡಲಾಗಿತ್ತು.

For All Latest Updates

TAGGED:

ABOUT THE AUTHOR

...view details