ಬೆಂಗಳೂರು:ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಜನತಾ ಪಾರ್ಟಿಯ ವತಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಲಾಯಿತು.
ಈ ಕುರಿತು ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನೆಡೆಸಿದ ಜನತಾ ಪಾರ್ಟಿ ನಗರ ಅಧ್ಯಕ್ಷ ಬಿ.ಎನ್.ಗೋಪಾಲಕೃಷ್ಣ ಚುನಾವಣೆ ಅಂಗವಾಗಿ ರಾಷ್ಟ್ರೀಯ ಪಕ್ಷಗಳು ಮತದಾರರನ್ನು ತಮ್ಮ ಕಡೆಗೆ ಓಲೈಸಿಕೊಳ್ಳಲು ಟಿವಿ, ಫ್ರಿಡ್ಜ್, ಕುಕ್ಕರ್, ಸೀರೆ, ಹಣ ಹಂಚುವುದರ ಮೂಲಕ ಮತದಾರರನ್ನು ಭ್ರಷ್ಟಕೂಪಕ್ಕೆ ತಳ್ಳುತ್ತಿವೆ. ಪ್ರಜಾಪ್ರಭುತ್ವವನ್ನು ಕಗ್ಗೋಲೆ ಮಾಡುತ್ತಿವೆ. ಇಂತಹ ನೀಚ ಸಂಸ್ಕೃತಿಯನ್ನು ಬೆಳೆಸಿಕೊಂಡ ಪಕ್ಷಗಳಿಗೆ ಜನರು ತಕ್ಕ ಪಾಠ ಕಲಿಸಬೇಕಾಗಿದೆ. ಇದರ ಬಗ್ಗೆ ಚುನಾವಣಾ ಆಯೋಗವು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂದು ಜನತಾ ಪಕ್ಷದಿಂದ ಒತ್ತಾಯಿಸುತ್ತಿದ್ದೇವೆ.
ಜನಪರವಾದ ಕೆಲಸ ಮಾಡಲು ಜನತಾ ಪಕ್ಷ ಮತ್ತೆ ಬರುತ್ತಿದೆ: ಇತಿಹಾಸವಿರುವಂತಹ ನೇಗಿಲು ಹೊತ್ತ ರೈತನ ಜನತಾ ಪಕ್ಷ ಮತ್ತೆ ಮರುಕಳಿಸುತ್ತಿದೆ. ಜನತಾ ಪಕ್ಷ ಜನಪರವಾದ ಕೆಲಸ ಮಾಡಲು ಬರುತ್ತಿದೆ. 2023ರ ಚುನಾವಣೆಯಲ್ಲಿ ಜನತಾ ಸರ್ಕಾರ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಹೇಳಿದರು.