ಬೆಂಗಳೂರು:ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳಿಗೆ ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ಮಧ್ಯಾಹ್ನ 12ಗಂಟೆ ವೇಳೆಗೆ ಶೇ.29ರಷ್ಟು ಮತದಾನ ನಡೆದಿದೆ. ಮಧ್ಯಾಹ್ನ 12ಗಂಟೆಗೆ ಚುನಾವಣಾ ಆಯೋಗ ನೀಡಿದ ಮಾಹಿತಿಯಂತೆ ಈಶಾನ್ಯ ಶಿಕ್ಷಕರ (ಕಲಬುರಗಿ) ಕ್ಷೇತ್ರದಲ್ಲಿ ಶೇ 36.49 ರಷ್ಟು, ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಶೇ.32 ರಷ್ಟು, ಆಗ್ನೇಯ ಪದವೀಧರ (ಬೆಂಗಳೂರು) ಕ್ಷೇತ್ರದಲ್ಲಿ ಶೇ.24 ರಷ್ಟು ಹಾಗೂ ಪಶ್ಚಿಮ ಪದವೀಧರ (ಬೆಳಗಾವಿ) ಕ್ಷೇತ್ರಕ್ಕೆ ಶೇ. 24.89 ರಷ್ಟು ಮತಗಳು ಚಲಾವಣೆ ಆಗಿವೆ.
ಶಿಕ್ಷಕರ-ಪದವೀಧರರ ಕ್ಷೇತ್ರ ಚುನಾವಣೆ: ಮಧ್ಯಾಹ್ನದ ಹೊತ್ತಿಗೆ ಶೇ.29 ರಷ್ಟು ಮತದಾನ - ಚುನಾವಣಾ ಆಯೋಗ ಸುದ್ದಿ
ಶಿಕ್ಷಕ ಮತ್ತು ಪದವೀಧರ ಕ್ಷೇತ್ರಗಳಿಗೆ ಇಂದು ನಡೆಯುತ್ತಿರುವ ಚುನಾವಣೆಯಲ್ಲಿ ಮಧ್ಯಾಹ್ನ 12 ಗಂಟೆ ವೇಳೆಗೆ ಶೇ.29ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಶಿಕ್ಷಕರ-ಪದವೀಧರರ ಕ್ಷೇತ್ರ ಚುನಾವಣೆ
ಬೆಳಗ್ಗೆ 8 ರಿಂದ 10 ಗಂಟೆವರೆಗೂ ಶೇ 8ರಷ್ಟು ಮತದಾನ ನಡೆದಿತ್ತು. 10 ಗಂಟೆ ನಂತರ ಮತದಾನ ಚುರುಕುಗೊಂಡಿದೆ.
ಮಧ್ಯಾಹ್ನ 12 ಗಂಟೆ ಹೊತ್ತಿಗೆ ಚಲಾವಣೆಯಾದ ಶೇಕಡವಾರು ಮತದಾನ
ಈಶಾನ್ಯ ಶಿಕ್ಷಕರು (ಕಲಬುರಗಿ) 36.49%
ಬೆಂಗಳೂರು ಶಿಕ್ಷಕರು (ಬೆಂಗಳೂರು) 32%
ಆಗ್ನೇಯ ಪದವೀಧರ (ಬೆಂಗಳೂರು) 24%
ಪಶ್ಚಿಮ ಪದವೀಧರ (ಬೆಳಗಾವಿ) 24.89%
ಬೆಳಗ್ಗೆ ಹತ್ತು ಗಂಟೆ ವೇಳೆಗೆ ಚಲಾವಣೆಯಾಗಿದ್ದ ಶೇಕಡವಾರು ಮತದಾನ
ಈಶಾನ್ಯ ಶಿಕ್ಷಕರು (ಕಲಬುರಗಿ) 8.34%
ಬೆಂಗಳೂರು ಶಿಕ್ಷಕರು (ಬೆಂಗಳೂರು) 10%
ಆಗ್ನೇಯ ಪದವೀಧರ (ಬೆಂಗಳೂರು) 7%
ಪಶ್ಚಿಮ ಪದವೀಧರ (ಬೆಳಗಾವಿ) 7.49%