ಕರ್ನಾಟಕ

karnataka

ETV Bharat / state

ದರ್ಶನ್​ ಹುಟ್ಟುಹಬ್ಬದಂದು ಪೇದೆ ಮೇಲೆ ಕಲ್ಲು ತೂರಾಟ: ಆಸ್ಪತ್ರೆ ಬಿಲ್​ ಕಟ್ಟಲು ಕುಟುಂಬದ ಪರದಾಟ - ದರ್ಶನ್​ ಹುಟ್ಟುಹಬ್ಬ

ದರ್ಶನ ಹುಟ್ಟುಹಬ್ಬದಂದು ಕೆಲ ಕಿಡಿಗೇಡಿಗಳು ಭದ್ರತೆಗೆ ಬಂದಿದ್ದ ಪೇದೆ ಮೇಲೆಯೇ ಕಲ್ಲೆಸೆದಿದ್ದರು. ಇದೀಗ ಪೇದೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಗೆ ಅವರ ಕುಟುಂಬಸ್ಥರು ಹಣ ಹೊಂದಿಸಲಾಗದೇ ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆ ಡಿಸಿಪಿ ರಮೇಶ್ ಕುಮಾರ್ ಹಾಗೂ ಸಹೋದ್ಯೋಗಿಗಳು ಪೇದೆಯ ಚಿಕಿತ್ಸೆಗೆ ಹಣ ನೀಡಲು ಮುಂದಾಗಿದ್ದಾರೆ.

Assaulted police constable in Darshan on birthday
ದರ್ಶನ್​ ಹುಟ್ಟುಹಬ್ಬದಂದು ಪೇದೆ ಮೇಲೆ ಹಲ್ಲೆ

By

Published : Feb 19, 2020, 5:21 PM IST

ಬೆಂಗಳೂರು: ದರ್ಶನ್ ಮನೆ ಬಳಿ ಪೇದೆ ದೇವರಾಜ್ ಮೇಲೆ ಕಿಡಿಗೇಡಿಗಳು ಕಲ್ಲೆಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ ಗಾಯಗೊಂಡಿರುವ ಪೇದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಯ ಬಿಲ್ ಕಟ್ಟಲು ಹಣವಿಲ್ಲದೆ ಪೇದೆ ದೇವರಾಜ್ ಅವರ ಕುಟುಂಬಸ್ಥರು ಪರದಾಡುವಂತಾಗಿದೆ.

ದರ್ಶನ್ ಆಗಲಿ ಅಥವಾ ಹುಟ್ಟುಹಬ್ಬ ಆಯೋಜಿಸಿದ್ದ ಆಯೋಜಕರಾಗಲಿ ಪೇದೆಗೆ ಸಹಾಯ ಮಾಡಲು ಮುಂದಾಗಿಲ್ಲ ಎನ್ನಲಾಗ್ತಿದೆ. ಜ್ಞಾನಭಾರತಿ ಪೇದೆಯಾಗಿರುವ ದೇವರಾಜ್​ರನ್ನ ನಟ ದರ್ಶನ್ ಜನ್ಮದಿನದಂದು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಆ ವೇಳೆ ಕೆಲ ಅಭಿಮಾನಿಗಳು ತಳ್ಳಾಟ ನೂಕಾಟ ನಡೆಸಿದ್ದರು. ಇದನ್ನು ತಡೆಯಲು ಹೋದ ಪೇದೆ ಮೇಲೆ ಕಲ್ಲು ಎಸೆದಿದ್ದರು. ಈ ವೇಳೆ ಮೂಗಿನ ಭಾಗ ಹಾಗೂ ಕಣ್ಣಿನ ಐ ಸಾಕೆಟ್​ಗೆ ಪೆಟ್ಟಾಗಿದೆ.

ಪೇದೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆಗೆ ಅವರ ಕುಟುಂಬ ಹಣ ಹೊಂದಿಸಲಾಗದೇ ಸಮಸ್ಯೆಗೆ ಸಿಲುಕಿದ್ದಾರೆ. ಈ ಹಿನ್ನೆಲೆ ಡಿಸಿಪಿ ರಮೇಶ್ ಬಾನೋತ್​ ಹಾಗೂ ಸಹೋದ್ಯೋಗಿಗಳು ಹಣ ನಿಡಲು ಮುಂದಾಗಿದ್ದಾರೆ. ಸದ್ಯ ದೇವರಾಜ್​ 3 ತಿಂಗಳು ಬೆಡ್ ರೆಸ್ಟ್ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಘಟನೆ ಸಂಬಂಧ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ABOUT THE AUTHOR

...view details