ಕರ್ನಾಟಕ

karnataka

ETV Bharat / state

ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ಪ್ರಕರಣ: ಏಜೆನ್ಸಿ ಮಾಲೀಕ ಸಲೀಂ ಖಾನ್ ಬಂಧನ - agency owner Salim Khan arrested

ಸೆಕ್ಯೂರಿಟಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಕ್ಯೂರಿಟಿ ಏಜೆನ್ಸಿ ಮಾಲೀಕ ಸಲೀಂ ಖಾನ್ ಹಾಗೂ ಆತನ ಸಹಚರರನ್ನ ಪೊಲೀಸರು ಬಂಧಿಸಿದ್ದಾರೆ.

ಸೆಕ್ಯೂರಿಟಿ ಗಾರ್ಡ್

By

Published : Oct 16, 2019, 4:58 AM IST

ಬೆಂಗಳೂರು: ಸೆಕ್ಯೂರಿಟಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗು ಸೆಕ್ಯೂರಿಟಿ ಏಜೆನ್ಸಿ ಮಾಲೀಕ ಸಲೀಂ ಖಾನ್ ಹಾಗೂ ಆತನ ಸಹಚರರನ್ನ ಬಂಧನ ಮಾಡುವಲ್ಲಿ HSR ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.

ಇನ್ನು ಆರೋಪಿಯನ್ನ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕ್ತಿದ್ದಾರೆ. ಬಂಧಿತ ಸಲೀಂ ಖಾನ್ ಖಾಸಗಿ ಸೆಕ್ಯೂರಿಟಿ ಕಂಪನಿಯ‌ ಮಾಲೀಕ. ಈತ ಪರೀಜುದ್ದೀನ್ ಹಾಗು ರೈಸ್ಉದ್ದೀನ್ ತನ್ನನ್ನು‌ ಅಪಹರಿಸಿ ಹಣ ದೋಚುವ ಬಗ್ಗೆ ಮಾತನಾಡುತ್ತಿದ್ದು, ಈ ಬಗ್ಗೆ ಮಾಹಿತಿ ಹಿನ್ನೆಲೆ ಇಬ್ಬರು ಸಿಬ್ಬಂದಿಗಳನ್ನ ತನ್ನ ಕಚೇರಿಗೆ ಕರೆಸಿ, ಕೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿರುವುದಾಗಿ ಸಲೀಂ ಖಾನ್​ ತಿಳಿಸಿದ್ದಾನೆ.

ಈ ಘಟನೆ ಸಂಬಂಧ cr 328/19 us 307,342 rw 149 IPC ಅಡಿಯಲ್ಲಿ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ABOUT THE AUTHOR

...view details