ಕರ್ನಾಟಕ

karnataka

ಮಾಸ್ಕ್​ ಹಾಕ್ಕೊಳ್ಳಿ ಎಂದಿದ್ದಕ್ಕೆ ಪೊಲೀಸರ ಮೇಲೆಯೇ ಹಲ್ಲೆ: ಬೆಂಗಳೂರಿನಲ್ಲಿ ಐವರ ಬಂಧನ

By

Published : Jul 9, 2021, 2:36 PM IST

ಸಿದ್ದಾಪುರ ಪೊಲೀಸ್ ಠಾಣೆಯ ಹೆಡ್​ಕಾನ್​ಸ್ಟೇಬಲ್‌ ಗುರುಪ್ರಸಾದ್ ಎಂಬುವರು ನೀಡಿದ ದೂರಿನ ಮೇರೆಗೆ ಅರ್ಬಾಜ್ ಖಾನ್, ಏಜಾಜ್ ಖಾನ್, ಸಲ್ಮಾನ್ ಖಾನ್, ಇಜಾಜ್ ಹಾಗೂ ಮಹಿಳೆಯರಾದ ಸಮೀನಾ,‌ ಶಂಸದ್ ಎಂಬುವರನ್ನು ಬಂಧಿಸಲಾಗಿದೆ.

ಐವರ ಬಂಧನ
ಐವರ ಬಂಧನ

ಬೆಂಗಳೂರು: ಮಾಸ್ಕ್ ಹಾಕಿಕೊಳ್ಳಿ ಎಂದು ಬುದ್ಧಿ ಹೇಳಿದ್ದ ಹೆಡ್​ಕಾನ್​ಸ್ಟೇಬಲ್‌ ಸಮವಸ್ತ್ರ ಹರಿದು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಐವರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ಸಿದ್ದಾಪುರ ಪೊಲೀಸ್ ಠಾಣೆಯ ಹೆಡ್​ಕಾನ್​ಸ್ಟೇಬಲ್‌ ಗುರುಪ್ರಸಾದ್ ಎಂಬುವರು ನೀಡಿದ ದೂರಿನ ಮೇರೆಗೆ ಅರ್ಬಾಜ್ ಖಾನ್, ಏಜಾಜ್ ಖಾನ್, ಸಲ್ಮಾನ್ ಖಾನ್, ಇಜಾಜ್ ಹಾಗೂ ಮಹಿಳೆಯರಾದ ಸಮೀನಾ,‌ ಶಂಸದ್ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ‌ ಮೊಹಮ್ಮದ್ ಎಂಬಾತ ತಲೆಮರೆಸಿಕೊಂಡಿದ್ದು ಪೊಲೀಸರು ಶೋಧಕಾರ್ಯ ಮುಂದುವರಿಸಿದ್ದಾರೆ.

ಪ್ರಕರಣದ ಹಿನ್ನೆಲೆ
ಹೆಡ್​ಕಾನ್​ಸ್ಟೇಬಲ್‌ ಗುರುಪ್ರಸಾದ್ ಹಾಗೂ ಕಾನ್​ಸ್ಟೇಬಲ್‌ ರವೀಶ್ ಜೂ. 27 ರಂದು ರಾತ್ರಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಗುಟ್ಟೆಪಾಳ್ಯದಲ್ಲಿ 20 ರಿಂದ 30 ಜನರು ಸೇರಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು, ಗುಂಪು ಚದುರಿಸಲು ತೆರಳಿದ್ದಾರೆ.

ಈ ಸಮಯದಲ್ಲಿ ಬೋರ್​ವೆಲ್‌​ ಗಲ್ಲಿ ಕಡೆ ಬರುವಾಗ ಅನುಮಾನಾಸ್ಪದವಾಗಿ ನಿಂತಿದ್ದ ವ್ಯಕ್ತಿಯನ್ನು ಕಂಡು ಮಾಸ್ಕ್ ಧರಿಸಿ ಮನೆಗೆ ಹೋಗುವಂತೆ ಸೂಚನೆ ನೀಡಿದ್ದಾರೆ‌. 'ನೀವು ಯಾರು ಮಾಸ್ಕ್ ಹಾಕಿ ಎಂದು ಹೇಳೋಕೆ?' ಎಂದು ಅವಾಚ್ಯ ಶಬ್ಧಗಳಿಂದ ಪೊಲೀಸರನ್ನು ನಿಂದಿಸಿದ್ದಾನೆ‌. ಚೀತಾ ವಾಹನದಲ್ಲಿದ್ದ ಪೊಲೀಸರ ಮೇಲೆ ಮಹಿಳೆಯರು ಸೇರಿ ಆರು ಮಂದಿ ಏಕಾಏಕಿ ಸುತ್ತುವರೆದು ಕಪಾಳಮೋಕ್ಷ‌ ಮಾಡಿದ್ದಾರೆ. ಧರಿಸಿದ್ದ ಸಮವಸ್ತ್ರ ಹರಿದು ಹಾಕಿದ್ದಾರೆ. ಜೊತೆಯಲ್ಲಿದ್ದ ಮತ್ತೋರ್ವ ಕಾನ್​ಸ್ಟೇಬಲ್​ ಬಟ್ಟೆಯನ್ನು‌ ಎಳೆದಾಡಿದ್ದಾರೆ. ಬೈಕ್ ಕೀ‌ ಕಸಿದುಕೊಂಡು ಜೀವ ಬೆದರಿಕೆ ಹಾಕಿದ್ದಾರೆ ಎಂದು ನೀಡಿದ‌ ದೂರಿನ‌ ಮೇರೆಗೆ ಐವರನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details