ಬೆಂಗಳೂರು: ಹವಾ ಸೃಷ್ಟಿಸಲು ವಿನಾಕಾರಣ ಸ್ನೇಹಿತರ ಮೇಲೆ ಹಲ್ಲೆ ಮಾಡಿರುವ ಘಟನೆ ಅಕ್ಟೋಬರ್ 1 ರಂದು ರಾತ್ರಿ ಕಲಾಸಿಪಾಳ್ಯ ಮುಖ್ಯರಸ್ತೆಯ ಶಮಂತ್ ಬಾರ್ನಲ್ಲಿ ನಡೆದಿದೆ. ಮೋಹನ್ ಕುಮಾರ್ ಹಾಗೂ ಸತೀಶ್ ಎಂಬಾತನ ಮೇಲೆ ರೌಡಿಶೀಟರ್ ವೀರು ಸಹಚರರಾದ ಚಂದನ್, ಗಿರಿ, ದೀಪು, ಮಂಜ ಮತ್ತಿತರ ಆರೋಪಿಗಳ ಗುಂಪು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದೆ.
ಚಂದನ್ ಅಲಿಯಾಸ್ ವೀರು ಬೆಂಗಳೂರು ಪಶ್ಚಿಮ ವಿಭಾಗದ ರೌಡಿಶೀಟರ್ ಆಗಿದ್ದು, ಇತ್ತೀಚೆಗೆ ಜೈಲಿನಿಂದ ಹೊರ ಬಂದಿದ್ದ. ಅಕ್ಟೋಬರ್ 1ರ ರಾತ್ರಿ ಶಮಂತ್ ಬಾರ್ಗೆ ಬಂದಿದ್ದ ಆತನ ಸಹಚರರಾದ ಚಂದನ್ ಅಂಡ್ ಟೀಂ ಕಾರಣವಿಲ್ಲದೇ ಮೋಹನ್ ಕುಮಾರ್ ಹಾಗೂ ಸತೀಶ್ ಮೇಲೆ ಮುಗಿಬಿದ್ದಿದೆ. 'ನಮ್ಮಣ್ಣ ಜೈಲಿನಿಂದ ಬಂದಿದ್ದಾನೆ' ಅಂತ ಹವಾ ಸೃಷ್ಟಿಸಲು, ಮೋಹನ್ ಹಾಗೂ ಆತನ ಸ್ನೇಹಿತ ಸತೀಶ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಅಷ್ಟೆ ಸಾಲದು ಎಂಬಂತೆ ಬಲವಂತವಾಗಿ ಕಾರಿನಲ್ಲಿ ಕರೆದೊಯ್ದು ಹಲ್ಲೆ ಮಾಡಿದ್ದಾರೆ.