ಕರ್ನಾಟಕ

karnataka

ETV Bharat / state

ವೈದ್ಯರ ಮೇಲೆ ಹಲ್ಲೆ ಪ್ರಕರಣ: ಕರವೇ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು - karave workers arrested for Assault on doctors Case

ವೈದ್ಯರ ಮೇಲೆ ಹಲ್ಲೆ ಪ್ರಕರಣದಡಿ ಕರವೇ ಕಾರ್ಯಕರ್ತರಾದ ಅಶ್ವಿನಿ ಗೌಡ, ರಮಾದೇವಿ, ಗಾಯತ್ರಿ, ಶಶಿಕಲಾ, ಮನುಗೌಡ, ಮಧುಸೂಧನ್, ಲೋಕೇಶ್, ವಿನೋದ್, ವಿಶಾಲ್, ಕಿರಣ್ ಎಂಬುವವರನ್ನು ಪೊಲೀಸರು ಬಂಧಿಸಿ ಪೊಲೀಸ್ ವಾಹನದಲ್ಲೇ ವಿವಿ ಪುರಂ ಪೊಲೀಸ್ ಸ್ಟೆಷನ್​ಗೆ ಕರೆದುಕೊಂಡು ಹೋಗಿದ್ದಾರೆ.

ವೈದ್ಯರ ಮೇಲೆ ಹಲ್ಲೆ ಪ್ರಕರಣ: ಕರವೇ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು

By

Published : Nov 8, 2019, 12:42 PM IST

ಬೆಂಗಳೂರು:ಕರವೇ ಕಾರ್ಯಕರ್ತರು ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆಂಬ ಆರೋಪದ ಮೇರೆಗೆ ಒಂದೆಡೆ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಸದ್ಯ, ಕರವೇ ಕಾರ್ಯಕರ್ತರು ದಕ್ಷಿಣ ವಿಭಾಗ ವ್ಯಾಪ್ತಿಯ ವಿವಿಪುರಂ ಪೊಲೀಸರ ಎದುರು ಶರಣಾಗಿದ್ದಾರೆ.

ವೈದ್ಯರ ಮೇಲೆ ಹಲ್ಲೆ ಪ್ರಕರಣ: ಕರವೇ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲು

ಕರವೇ ಕಾರ್ಯಕರ್ತರಾದ ಅಶ್ವಿನಿ ಗೌಡ, ರಮಾದೇವಿ, ಗಾಯತ್ರಿ, ಶಶಿಕಲಾ, ಮನುಗೌಡ, ಮಧುಸೂಧನ್, ಲೋಕೇಶ್, ವಿನೋದ್, ವಿಶಾಲ್, ಕಿರಣ್ ಎಂಬುವವರನ್ನು ಪೊಲೀಸರು ಬಂಧಿಸಿ ಪೊಲೀಸ್ ವಾಹನದಲ್ಲೇ ವಿವಿ ಪುರಂ ಪೊಲೀಸ್ ಸ್ಟೆಷನ್​ಗೆ ಕರೆದುಕೊಂಡು ಹೋಗಿದ್ದಾರೆ.

ಇನ್ನು ಠಾಣೆಯಿಂದ ಕಾರ್ಯಕರ್ತರನ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಪ್ರಕರಣದಲ್ಲಿ ಹೆಚ್ಚಿನ ವಿಚಾರಣೆಯ ಅವಶ್ಯಕತೆ ಇಲ್ಲದೆ ಇರುವುದರಿಂದ ಪೊಲೀಸ್ರು ಕಸ್ಟಡಿಗೆ ಕೇಳುವ ಸಾಧ್ಯತೆ ಕಡಿಮೆಇದೆ ಎಂದು ತಿಳಿದು ಬಂದಿದೆ.

ಆದರೆ ವಿವಿಪುರ ಠಾಣೆಯಲ್ಲಿ ಐಪಿಸಿ 506 ,341,149,504,323, IPC ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ಇದೇ ವೇಳೆ ಜಾಮೀನಿಗೆ ಕರವೇ ಕಾರ್ಯಕರ್ತರ ಪರ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ. ಜಾಮೀನು ನೀಡುವುದು ನ್ಯಾಯಾಲಯದ ವಿವೇಚನೆಗೆ ಬಿಟ್ಟದ್ದು. ಆದರೆ ಕೆಲವೊಂದು ಪ್ರಕರಣದಲ್ಲಿ 353 ಸೆಕ್ಷನ್ ದಾಖಲಾಗಿದ್ದಾಗಿಯೂ ಸಾಕ್ಷ್ಯ ನಾಶ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿಲ್ಲದೆ ಇದ್ದಾಗ ಜಾಮೀನು ನೀಡಿದೆ.

ಹೀಗಾಗಿ ಇದೇ ನಿರೀಕ್ಷೆಯಲ್ಲಿ ಕರವೇ ಕಾರ್ಯ ಕರ್ತರಿದ್ದು ನ್ಯಾಯಾಲಯ ಏನು ನಿರ್ಧಾರ ನೀಡುತ್ತೆ ಅದರ ಮೇಲೆ ಕರವೇ ಕಾರ್ಯಕರ್ತರ ಭವಿಷ್ಯ ನಿಂತಿದೆ.

For All Latest Updates

ABOUT THE AUTHOR

...view details