ಕರ್ನಾಟಕ

karnataka

ETV Bharat / state

ಪಬ್ ಗಲಾಟೆಯಲ್ಲಿ‌ ಮತ್ತೆ ಸುದ್ದಿಯಾದ ಸುನಾಮಿ ಕಿಟ್ಟಿ: ದೂರು ದಾಖಲು! - ಸುನಾಮಿ ಕಿಟ್ಟಿ ವಿರುದ್ಧ ದೂರು

ಪಬ್​ನಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಹ ಗ್ರಾಹಕರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಸುನಾಮಿ ಕಿಟ್ಟಿ ಮತ್ತು ಸ್ನೇಹಿತ ಚೇತನ್ ಗೌಡ ಅವರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tsunami Kitty
ಸುನಾಮಿ ಕಿಟ್ಟಿ

By

Published : Aug 5, 2022, 1:26 PM IST

ಬೆಂಗಳೂರು: ರಿಯಾಲಿಟಿ ಶೋ ಮೂಲಕ ರಾಜ್ಯದಲ್ಲಿ ಖ್ಯಾತಿ ಪಡೆದು ಬಳಿಕ ಬಾರ್ ಗಲಾಟೆ, ಕಿಡ್ನ್ಯಾಪ್ ಪ್ರಕರಣಗಳಲ್ಲಿ ಪೊಲೀಸರ ಅತಿಥಿಯಾಗಿದ್ದ ಸುನಾಮಿ ಕಿಟ್ಟಿ ಇದೀಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಪಬ್​ನಲ್ಲಿ ಕ್ಷುಲ್ಲಕ ವಿಚಾರಕ್ಕೆ ಸಹ ಗ್ರಾಹಕರೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಸುನಾಮಿ ಕಿಟ್ಟಿ ಮತ್ತು ಸ್ನೇಹಿತ ಚೇತನ್ ಗೌಡ ಅವರ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುನಾಮಿ ಕಿಟ್ಟಿ

ಜುಲೈ 24ರ ರಾತ್ರಿ ಚರ್ಚ್ ಸ್ಟ್ರೀಟ್​ನ ಪಬ್​​ ಒಂದರಲ್ಲಿ ಘಟನೆ ನಡೆದಿದೆ. ಪಾರ್ಟಿಯಲ್ಲಿ ತೊಡಗಿದ್ದ ಚೇತನ್ ಗೌಡ, ಕಿಟ್ಟಿ ಮತ್ತು ಆತನ ಸ್ನೇಹಿತರು ಶ್ಯಾಂಪೇನ್ ಓಪನ್ ಮಾಡುವಾಗ ಪಕ್ಕದ ಟೇಬಲ್​ನಲ್ಲಿದ್ದ ಪ್ರಶಾಂತ್ ಎಂಬುವವರ ಮೇಲೆ ಬಿದ್ದಿದೆ. 'ನೀವು ಪಾರ್ಟಿ ಮಾಡೋದು ಮಾಡಿಕೊಳ್ಳಿ, ನಮ್ಮ ಮೇಲೆ ಶಾಂಪೇನ್ ಎರಚಬೇಡಿ' ಎಂದಿದ್ದಕ್ಕೆ ಸಿಟ್ಟಿಗೆದ್ದ ಕಿಟ್ಟಿ ಗ್ಯಾಂಗ್​ನಿಂದ ಪ್ರಶಾಂತ್ ಮತ್ತು ಅವರ ಸ್ನೇಹಿತರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಪ್ರಶಾಂತ್ ನೀಡಿದ ದೂರಿನನ್ವಯ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿಟ್ಟಿ ಟೀಂನಿಂದ ಪ್ರತಿದೂರು: ಘಟನೆಗೆ ಸಂಬಂಧಿಸಿದಂತೆ ಚೇತನ್ ಕಿಶೋರ್ ಎಂಬುವವರಿಂದ ಸಹ ದೂರು ದಾಖಲಾಗಿದ್ದು 'ಶಾಂಪೇನ್ ಅವರ ಮೇಲೆ ಬಿದ್ದಿದ್ದಕ್ಕೆ ನಮ್ಮನ್ನು ಪ್ರಶ್ನಿಸಿ ಬಿಯರ್ ಬಾಟಲಿಯಿಂದ ಹಲ್ಲೆ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎರಡೂ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಕಾರವಾರ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ, ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ

ABOUT THE AUTHOR

...view details