ಬೆಂಗಳೂರು: ಕೇಂದ್ರ ಸರ್ಕಾರವು ಪ್ರತಿ ವರ್ಷ ಪೊಲೀಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಇಲಾಖೆ ನೀಡುವ ಪದಕ ವಿಜೇತರನ್ನು ಘೋಷಿಸಲಾಗಿದ್ದು, ಈ ಪೈಕಿ ಕರ್ನಾಟಕದ ಆರು ಮಂದಿ ಪದಕಕ್ಕೆ ಭಾಜನರಾಗಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣ: ತನಿಖಾಧಿಕಾರಿಗೆ ಹೋಮ್ ಮಿನಿಸ್ಟರ್ ಪದಕ - ಗೃಹ ಮಂತ್ರಿ ಪದಕ
ಗೌರಿ ಲಂಕೇಶ್ ಹತ್ಯೆ ಪ್ರಕರಣ ಭೇದಿಸಿದ ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್, ಎಸ್ಐಟಿ ತಂಡದಲ್ಲಿದ್ದ ಡಿವೈಎಸ್ ಪಿ ಟಿ ಟಿ.ರಂಗಪ್ಪ, ಡಿವೈಎಸ್ಪಿ ಕೆ.ರವಿಶಂಕರ್, ಎಸ್ಪಿ ಜಾಹ್ನವಿ, ಇನ್ ಸ್ಪೆಕ್ಟರ್ ಜಿ.ಸಿ.ರಾಜಾ ಹಾಗೂ ಬಿ.ಎಸ್.ಸತೀಶ್ ಅವರು ಕೇಂದ್ರ ಗೃಹ ಸಿಚವರ ಪದಕಕ್ಕೆ ಅರ್ಹರಾಗಿದ್ದಾರೆ.

ಹೋಮ್ ಮಿನಿಸ್ಟರ್ ಪದಕ
ಗೌರಿ ಲಂಕೇಶ್ ಹತ್ಯೆ ಪ್ರಕರಣ ಭೇದಿಸಿದ ಐಪಿಎಸ್ ಅಧಿಕಾರಿ ಎಂ.ಎನ್.ಅನುಚೇತ್, ಎಸ್ಐಟಿ ತಂಡದಲ್ಲಿದ್ದ ಡಿವೈಎಸ್ ಪಿ ಟಿ ಟಿ.ರಂಗಪ್ಪ, ಡಿವೈಎಸ್ಪಿ ಕೆ.ರವಿಶಂಕರ್, ಎಸ್ಪಿ ಜಾಹ್ನವಿ, ಇನ್ ಸ್ಪೆಕ್ಟರ್ ಜಿ.ಸಿ.ರಾಜಾ ಹಾಗೂ ಬಿ.ಎಸ್.ಸತೀಶ್ ಅವರು ಈ ಪದಕಕ್ಕೆ ಅರ್ಹರಾಗಿದ್ದಾರೆ.
ತನಿಖಾ ವಿಭಾಗದಲ್ಲಿ ಉತ್ತಮ ಕಾರ್ಯದಕ್ಷತೆಗೆ ನೀಡಲಾಗುವ ಗೃಹ ಮಂತ್ರಿ ಪದಕವನ್ನು ಪ್ರತಿ ವರ್ಷ ಕೇಂದ್ರ ಸರ್ಕಾರ ನೀಡಲಿದೆ. ಈ ಬಾರಿ ಕರ್ನಾಟಕ ಸೇರಿದಂತೆ 96 ಪೊಲೀಸ್ ಅಧಿಕಾರಿಗಳು ಪದಕಕ್ಕೆ ಭಾಜನರಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.