ಬೆಂಗಳೂರು : ಕೆಲಸಕ್ಕೆ ರಜೆಯಿದ್ದ ಹಿನ್ನೆಲೆ ಎಣ್ಣೆ ಪಾರ್ಟಿ ಮಾಡಿ ಮನೆಗೆ ತೆರಳುತ್ತಿದ್ದವನ ಮೇಲೆ ದುಷ್ಕರ್ಮಿಗಳು ಅಟ್ಯಾಕ್ ಮಾಡಿ ಹತ್ಯೆಗೈದಿರುವ ಘಟನೆ ಆರ್ ಟಿ ನಗರದಲ್ಲಿ ನಡೆದಿದೆ. ಆರ್ ಟಿ ನಗರದ ನಿವಾಸಿ ಲೋಕೇಶ್ ಎಂಬುವರು ಕೊಲೆಯಾದ ಯುವಕ.
ವೃತ್ತಿಯಲ್ಲಿ ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ ಲೋಕೇಶ್, ನಿನ್ನೆ ರಜೆಯಿದ್ದ ಹಿನ್ನೆಲೆ ತನ್ನ ಗೆಳೆಯರೊಂದಿಗೆ ಬಾರ್‌ನಲ್ಲಿ ಎಣ್ಣೆ ಮಾರ್ಟಿ ಮಾಡಿದ್ದ. ಬಳಿಕ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಬೈಕ್‌ನಲ್ಲಿ ಪೆಟ್ರೋಲ್ ಖಾಲಿಯಾದ ಕಾರಣ, ಪೆಟ್ರೋಲ್ ಹಾಕಿಸಿಕೊಂಡು ಮನೆಗೆ ತೆರಳುತ್ತಿದ್ದ. ಆಗ ಮಾರ್ಗ ಮಧ್ಯೆ ಐದಾರು ಜನ ದುಷ್ಕರ್ಮಿಗಳು ಆತನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿದ್ದಾರೆ.