ಬೆಂಗಳೂರು:ನೇಮಕಾತಿ ಆದೇಶ ನೀಡುವಂತೆ ಒತ್ತಾಯಿಸಿ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಶ್ರೀಮಂತ ಪಾಟೀಲ್ ನಿವಾಸದೆದುರು 20ಕ್ಕೂ ಹೆಚ್ಚು ಅಭ್ಯರ್ಥಿಗಳಿಂದ ಅಹೋರಾತ್ರಿ ಧರಣಿ ನಡೆಯುತ್ತಿದ್ದು, ಧರಣಿಯಲ್ಲಿ ಮಹಿಳೆಯರೂ ಭಾಗಿಯಾಗಿದ್ದಾರೆ.
ಸಚಿವ ಶ್ರೀಮಂತ ಪಾಟೀಲ್ ನಿವಾಸದ ಎದುರು ಉದ್ಯೋಗಾಕಾಂಕ್ಷಿಗಳ ಅಹೋರಾತ್ರಿ ಧರಣಿ - protest near minister srimantha patil house
ಸಚಿವ ಶ್ರೀಮಂತ ಪಾಟೀಲ್ ನಿವಾಸದ ಎದುರು ಅಲ್ಪಸಂಖ್ಯಾತ ಇಲಾಖೆ ಉಪನ್ಯಾಸಕ ಉದ್ಯೋಗಾಕಾಂಕ್ಷಿಗಳು ಅಹೋರಾತ್ರಿ ಧರಣಿ ನಡೆಸಿದ್ದಾರೆ.
2017ರಲ್ಲಿ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ, ಕೆಪಿಎಸ್ಸಿ ಮೂಲಕ ಆಯ್ಕೆಯಾದ ಅಭ್ಯರ್ಥಿಗಳು ಇವರಾಗಿದ್ದು, ಪಿಯು ಉಪನ್ಯಾಸಕ ಹಾಗೂ ಮೊರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಅಭ್ಯರ್ಥಿಗಳಿಗೆ ಒಂದೇ ಸಮಯದಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿದೆ. ಈಗಾಗಲೇ 1200 ಪಿಯು ಉಪನ್ಯಾಸಕರಿಗೆ ನೇಮಕಾತಿ ಆದೇಶ ನೀಡಲಾಗಿದ್ದು, ಅಲ್ಪಸಂಖ್ಯಾತ ಇಲಾಖೆಯಿಂದ 60 ಜನ ಉಪನ್ಯಾಸಕ ಅಭ್ಯರ್ಥಿಗಳ ನೇಮಕಾತಿ ತಡೆಹಿಡಿಯಲಾಗಿದ್ದು, ಸರ್ಕಾರದ ಮಲತಾಯಿ ಧೋರಣೆ ವಿರುದ್ಧ ಉದ್ಯೋಗಾಕಾಂಕ್ಷಿಗಳು ಧರಣಿ ನೆಡೆಸುತ್ತಿದ್ದಾರೆ.
ಉದ್ಯೋಗಾಕಾಂಕ್ಷಿಗಳನ್ನು ಭೇಟಿಯಾದ ಸಚಿವ ಶ್ರೀಮಂತ ಪಾಟೀಲ್ ಸಮಸ್ಯೆಗಳನ್ನು ಆಲಿಸಿದರು. 2017ರಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿದೆ. ಪಿಯು ಉಪನ್ಯಾಸಕ ಹಾಗೂ ಮೂರಾರ್ಜಿ ದೇಸಾಯಿ ಪದವಿ ಪೂರ್ವ ಕಾಲೇಜು ಅಭ್ಯರ್ಥಿಗಳಿಗೆ ಒಂದೇ ಸಮಯದಲ್ಲಿ ನೇಮಕಾತಿ ಪ್ರಕಿಯೆ ಮಾಡಲಾಗಿದೆ. ಪಿಯು ಉಪನ್ಯಾಸಕ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಈಗಾಗಲೇ ನೀಡಲಾಗಿದ್ದು, ನಮಗೆ ಯಾಕೆ ನೇಮಕಾತಿ ಆದೇಶ ನೀಡಿಲ್ಲ ಎಂದು ಸಚಿವರಿಗೆ ಪ್ರಶ್ನಿಸಿದ್ದಾರೆ. ಜೀವನ ನಡೆಸುವುದು ಕಷ್ಟವಾಗಿದೆ, ಮನೆ ಬಿಟ್ಟು ಇಲ್ಲಿಗೆ ಬಂದಿದ್ದೇವೆ, ಕೋವಿಡ್ನಿಂದಾಗಿ ನಮ್ಮ ಜೀವನ ಅತಂತ್ರವಾಗಿದೆ ಎಂದು ಸಚಿವರೆದುರು ಅಭ್ಯರ್ಥಿಗಳು ಕಣ್ಣೀರು ಸುರಿಸಿದ್ದಾರೆ.
TAGGED:
ಉದ್ಯೋಗಾಕಾಂಕ್ಷಿಗಳ ಧರಣಿ