ಬೆಂಗಳೂರು:ವಲಸೆ ಕಾರ್ಮಿಕರ ಮೇಲೆ ಕೈ ಮಾಡಿದ್ದ ಎಎಸ್ಐಯನ್ನು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅಮಾನತು ಮಾಡಿದ್ದಾರೆ.
ವಲಸೆ ಕಾರ್ಮಿಕರ ಮೇಲೆ ಹಲ್ಲೆ: ಎಎಸ್ಐ ಅಮಾನತು - ಡಿಸಿಪಿ ಶರಣಪ್ಪ
ಉತ್ತರ ಪ್ರದೇಶದ ವಲಸೆ ಕಾರ್ಮಿಕರ ಮೇಲೆ ಕೈ ಮಾಡಿದ್ದ ಕೆ.ಜಿ.ಹಳ್ಳಿಯ ಎಎಸ್ಐ ರಾಜ್ ಸಾಬ್ನನ್ನು ನಗರ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
![ವಲಸೆ ಕಾರ್ಮಿಕರ ಮೇಲೆ ಹಲ್ಲೆ: ಎಎಸ್ಐ ಅಮಾನತು ASI Raja sab suspend](https://etvbharatimages.akamaized.net/etvbharat/prod-images/768-512-7161683-thumbnail-3x2-chaii.jpg)
ಕೆ.ಜಿ.ಹಳ್ಳಿಯ ಎಎಸ್ಐ ರಾಜ್ ಸಾಬ್ ಕೆಲಸದಿಂದ ಅಮಾನತುಗೊಂಡವರು. ಲಾಕ್ಡೌನ್ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಕಾಡುಗೊಂಡನಹಳ್ಳಿ ಪೊಲೀಸ್ ಠಾಣೆಗೆ ಗುಂಪು ನೋಂದಣಿ ಮಾಡಿಸಿಕೊಳ್ಳಲು ಬಂದಿದ್ದರು. ಈ ವೇಳೆ ನೋಂದಣಿ ಇಲ್ಲಿ ಮಾಡುವುದಿಲ್ಲ ಎಂದು ಗದರಿಸಿ ಕಾರ್ಮಿಕರ ಮೇಲೆ ಕೈ ಮಾಡಿ, ಬೂಟ್ ಕಾಲಿನಲ್ಲಿ ಹೊಡೆಯುವ ಎಎಸ್ಐ ದರ್ಪ ತೋರಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಕಾರ್ಮಿಕರಿಗೆ ಎಎಸ್ಐ ಕಾಲಿನಿಂದ ಹೊಡೆಯುವುದನ್ನು ಮೊಬೈಲ್ನಲ್ಲಿ ಸೆರೆ ಹಿಡಿದು, ತಾವು ಅನುಭವಿಸುತ್ತಿರುವ ಯಾತನೆ ಕುರಿತು ನೆರವಿಗೆ ಧಾವಿಸುವಂತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಟ್ವೀಟರ್ ಅಕೌಂಟ್ಗೆ ಟ್ಯಾಗ್ ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಖಾಕಿ ಪಡೆ, ಆಂತರಿಕ ತನಿಖೆ ನಡೆಸಿ ತಪ್ಪಿತಸ್ಥ ಎಎಸ್ಐಯನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ.