ಕರ್ನಾಟಕ

karnataka

ನಿವೃತ್ತಿಗೆ ಎರಡೇ ತಿಂಗಳು ಬಾಕಿ: ಕರ್ತವ್ಯನಿರತ ASI ಹೃದಯಾಘಾತದಿಂದ ಸಾವು

By

Published : Mar 20, 2023, 10:55 AM IST

ಜಿಗಣಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಎಎಸ್ಐ ಒಬ್ಬರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

asi
ಎಎಸ್ಐ ಜೆ ಶ್ರೀನಿವಾಸ್

ಆನೇಕಲ್: ಕರ್ತವ್ಯ ನಿರ್ವಹಿಸುತ್ತಿದ್ದಾಗಲೇ ಅಸಿಸ್ಟೆಂಟ್‌ ಸಬ್‌ ಇನ್ಸ್‌ಪೆಕ್ಟರ್‌ (ಎಎಸ್ಐ) ಜೆ.ಶ್ರೀನಿವಾಸ್ (60) ಹೃದಯಾಘಾತದಿಂದ ಸೋಮವಾರ ಮುಂಜಾನೆ ಸಾವನ್ನಪ್ಪಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಅವರು ನಿನ್ನೆ (ಭಾನುವಾರ) ರಾತ್ರಿ ಬನ್ನೇರುಘಟ್ಟ-ಜಿಗಣಿ ಮುಖ್ಯರಸ್ತೆಯ ಕೊಪ್ಪಗೇಟ್ ಬಿಟ್ಟು ಜಿಗಣಿ ಕಡೆ ಬೈಕ್​ನಲ್ಲಿ ತೆರಳುತ್ತಿದ್ದಾಗ ರಕ್ತದೊತ್ತಡ ಹೆಚ್ಚಾಗಿ ಕೆಳಗೆ ಬಿದ್ದಿದ್ದರು. ಪರಿಣಾಮ ಭುಜಕ್ಕೆ ಗಾಯವಾಗಿತ್ತು. ಕೂಡಲೇ ಜಿಗಣಿ ಪೊಲೀಸರು ಪೋರ್ಟೀಸ್ ಆಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ, ಮುಂಜಾನೆ ಚಿಕಿತ್ಸೆ ಫಲಕಾರಿಯಾದೇ ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮೂಲತಃ ಬೆಂಗಳೂರಿನ ಹಲಸೂರಿನವರಾಗಿದ್ದ ಶ್ರೀನಿವಾಸ್ ಆನೇಕಲ್ ಉಪ ವಿಭಾಗದ ಠಾಣೆಗಳಲ್ಲಿ ಕೆಲಸ ನಿರ್ವಹಿಸಿದ್ದರು. ನಿವೃತ್ತಿ ಹೊಂದಲು ಕೇವಲ ಎರಡು ತಿಂಗಳಷ್ಟೇ ಬಾಕಿ ಇತ್ತು. ಮೃತರ ಸಾವಿಗೆ ಎಸ್​ಪಿ ಮಲ್ಲಿಕಾರ್ಜುನ ಬಾಲದಂಡೆ, ಎಎಸ್​ಪಿ ಪುರುಷೋತ್ತಮ್, ಡಿವೈಎಸ್​ಪಿ ಲಕ್ಷ್ಮಿನಾರಾಯಣ್, ಪಿಐ ಸುದರ್ಶನ್ ಮತ್ತು ಪೊಲೀಸ್ ಇಲಾಖೆಯ ಅಪಾರ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ:ಆನೇಕಲ್​ : ಕಬಡ್ಡಿ ರೈಡ್​ ವೇಳೆ ಹೃದಯಾಘಾತ, ವಿದ್ಯಾರ್ಥಿನಿ ಸಾವು

ಈ ಹಿಂದಿನ ಘಟನೆಗಳು:ಕಳೆದ ತಿಂಗಳ ಫೆ. 9 ರಂದು ಸಹ ಇಂತಹದೇ ಘಟನೆ ನಡೆದಿತ್ತು. ಶಾಲೆಯಲ್ಲಿ ಆಯೋಜಿಸಿದ್ದ ಕಬಡ್ಡಿ ಪಂದ್ಯಾವಳಿಯಲ್ಲಿ ಸ್ಪರ್ಧಿಸಿದ್ದ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಸಾವನ್ನಪ್ಪಿದ್ದಳು. ಆನೇಕಲ್ ತಾಲೂಕಿನ ಅತ್ತಿಬೆಲೆಯ ಸೇಂಟ್ ಫಿಲೋಮಿನಾ ಶಾಲೆಯಲ್ಲಿ ಘಟನೆ ನಡೆದಿತ್ತು. ಕಬಡ್ಡಿ ಆಡುತ್ತಿದ್ದಾಗ ರೈಡ್​ಗೆ ಹೋದ ವಿದ್ಯಾರ್ಥಿನಿ ಸಂಗೀತಾಳಿಗೆ ಹೃದಯಾಘಾತವಾಗಿತ್ತು. ಕೂಡಲೇ ಆಕೆಯನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೂ, ವಿದ್ಯಾರ್ಥಿನಿ ಬದುಕುಳಿಯಲಿಲ್ಲ.

ಇದನ್ನೂ ಓದಿ :ದೇವನಹಳ್ಳಿ : ಹೆಂಡತಿ ಕೈಗಳನ್ನೇ ಕತ್ತರಿಸಿ ಅಮಾನವೀಯತೆ ಮೆರೆದ ಗಂಡ

ಕಳೆದ ವರ್ಷದ ಡಿಸೆಂಬರ್ 1ರಂದು ಕೋಲಾರ ಜಿಲ್ಲೆಯ ಬಂಗಾರಪೇಟೆ ಠಾಣೆಯ ಹೆಡ್​ ಕಾನ್ಸ್​ಟೇಬಲ್​ ಹೃದಯಾಘಾತದಿಂದ ಮೃತಪಟ್ಟಿದ್ದರು. ರಾತ್ರಿ ಪಾಳಯದ ಕೆಲಸಕ್ಕಾಗಿ ಠಾಣೆಗೆ ಆಗಮಿದ್ದ ಸುರೇಶ್ ಕುಮಾರ್​ ಅವರಿಗೆ ಬೆಳಗಿನ ಜಾವ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ​ಸಾವನ್ನಪ್ಪಿದ್ದರು.

ಇದನ್ನೂ ಓದಿ:ಧಾರವಾಡ : ಲಾರಿಗೆ ಸಿಲುಕಿ ಕರ್ತವ್ಯನಿರತ ಕಾನ್ಸ್‌ಟೇಬಲ್ ಸಾವು - CCTV VIDEO

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಕರ್ತವ್ಯನಿರತರಾಗಿದ್ದ ಪೊಲೀಸ್​​ ಕಾನ್ಸ್‌ಟೇಬಲ್ ನಿಂಗಪ್ಪ ಭೂಸಣ್ಣವರ ಎಂಬುವರು ಅಪಘಾತದಲ್ಲಿ ಸೆಪ್ಟೆಂಬರ್​ 4, 2021 ರಲ್ಲಿ ಮೃತಪಟ್ಟಿದ್ದರು. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಇವರು ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದು, ಕೆಎಂಎಫ್ ಬಳಿ ಬೈಕ್​ನಲ್ಲಿ ತೆರಳುತ್ತಿದ್ದ ವೇಳೆ ಬೋರ್​​ವೆಲ್ ಲಾರಿಯ ಎಡಭಾಗದಡಿ ಸಿಲುಕಿ ಸಾವನ್ನಪ್ಪಿದ್ದರು.

ಇದನ್ನೂ ಓದಿ:ಕರ್ತವ್ಯನಿರತ ಪೊಲೀಸ್​ ಹೆಡ್​ಕಾನ್ಸ್​ಟೇಬಲ್​ ಹೃದಯಾಘಾತದಿಂದ ಸಾವು..

ಆನೇಕಲ್​: ಜೈಲಿಗೆ ಹೋಗಿ ಬಂದ ವ್ಯಕ್ತಿ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆ

ABOUT THE AUTHOR

...view details