ಬೆಂಗಳೂರು:ಸ್ಯಾಂಡಲ್ವುಡ್ ಗೆ ಡ್ರಗ್ ಲಿಂಕ್ ಆರೋಪ ಪ್ರಕರಣ ಸಂಬಂಧ ಆರೋಪಿ ಅಶ್ವಿನ್ನನ್ನ ಸಿಸಿಬಿ ಏಳು ದಿನ ವಶಕ್ಕೆ ಪಡೆದಿದ್ದು, ತನಿಖೆ ಚುರುಕುಗೊಳಿಸಿದೆ.
ಅಶ್ವಿನ್ ಅಲಿಯಾಸ್ ಬೂಗಿ 7 ದಿನ ಕಸ್ಟಡಿಗೆ.. ಮಹತ್ವದ ಮಾಹಿತಿ ಕಲೆ ಹಾಕಿದ ಸಿಸಿಬಿ
ಸ್ಯಾಂಡಲ್ವುಡ್ ಗೆ ಡ್ರಗ್ ಲಿಂಕ್ ಆರೋಪ ಪ್ರಕರಣವನ್ನ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿರುವ ಸಿಸಿಬಿ, ಆರೋಪಿ ಅಶ್ವಿನ್ನನ್ನ ಕಸ್ಟಡಿಗೆ ಪಡೆದು, ವಿಚಾರಣೆ ನಡೆಸಿದೆ.
ಅಶ್ವಿನ್ ಅಲಿಯಾಸ್ ಬೂಗಿ
ನಟಿ ರಾಗಿಣಿ ಆಪ್ತ ರವಿಶಂಕರ್ ಕಾಲೇಜಿನಲ್ಲಿ ಓದುತ್ತಿರುವಾಗ ಅಶ್ವಿನ್ಗೆ ಪರಿಚಯವಾಗಿದ್ದನಂತೆ. ಆತ ಕರೆದ ಪಾರ್ಟಿಗಳಲ್ಲಿ ಕೂಡ ಭಾಗಿಯಾಗುತ್ತಿದ್ದು, ನಂತರ ಡ್ರಗ್ ಸೇವನೆ, ಪೆಡ್ಲಿಂಗ್ ಮಾಡುವ ವಿಚಾರ ಬಾಯ್ಬಿಟ್ಟಿದ್ದಾನೆ. ಪಾರ್ಟಿಗಳಿಗೆ ಹೋಗ್ತಾ ನಟಿಯರಾದ ರಾಗಿಣಿ, ಸಂಜನಾ ಕೂಡ ಪರಿಚಯವಾಗಿದ್ದರಂತೆ. ನೈಜೀರಿಯಾ ಪ್ರಜೆಗಳ ಸಂಪರ್ಕದಿಂದ ರವಿಶಂಕರ್ ಡ್ರಗ್ ಪಡೀತಿದ್ದ ಅನ್ನೋ ಮಹತ್ವದ ವಿಚಾರ ಬಾಯ್ಬಿಟ್ಟಿದ್ದಾನೆ.
ಅಶ್ವಿನ್ರಿಂದ ಇಷ್ಟೆಲ್ಲ ಮಾಹಿತಿ ಕಲೆ ಹಾಕಿದ ಸಿಸಿಬಿ, ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದೆ.