ಬೆಂಗಳೂರು: ರಾಮನಗರ ಕ್ಲೀನಿಂಗ್ಗೆ ಒಂದು ಲೋಡ್ ಪೊರಕೆ ಕಳಿಸುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಏನು ಕ್ಲೀನಿಂಗ್ ನಡೆಯುತ್ತಿದೆ ಎಂದು ಅವರಿಗೆ ಗೊತ್ತಿಲ್ಲವಾ? ಕ್ಲೀನಿಂಗ್ನಲ್ಲಿ ಡಿಕೆ ಶಿವಕುಮಾರ್ ಕೂಡ ಇದ್ದಾರೆ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ಅವರೇ ರಾಜಕೀಯವಾಗಿ ರಾಮನಗರದಿಂದ ಕ್ಲೀನ್ ಆಗಲಿದ್ದಾರೆ ಎಂದು ಸಚಿವ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಮನಗರವನ್ನು ಕ್ಲೀನ್ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ಇದಕ್ಕೆ ಅದೇನು ಕ್ಲೀನ್ ಮಾಡುತ್ತಾರೋ ಏನೋ, ಅದಕ್ಕೆ ನಾನು ಒಂದು ಲೋಡ್ ಪೊರಕೆ ಕಳಿಸವುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಈಗ ರಾಮನಗರ ಕ್ಲೀನಿಂಗ್ ನಡಿತಾ ಇದೆ, ಏನು ಕ್ಲೀನಿಂಗ್ ಆಗುತ್ತಿದೆ ಎಂದು ಇವರಿಗೆ ಗೊತ್ತಿಲ್ಲವಾ, ಈಗಾಗಲೇ ಕ್ಲೀನಿಂಗ್ ಪ್ರಕ್ರಿಯೆ ಆರಂಭವಾಗಿದೆ, ಆ ಕ್ಲೀನಿಂಗ್ನಲ್ಲಿ ಡಿಕೆ ಶಿವಕುಮಾರ್ ಕೂಡ ಸೇರಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪ್ರಜಾಪ್ರಭುತ್ವ, ಪ್ರಜಾಧ್ವನಿಯನ್ನು ಗೌರವಿಸಿಲ್ಲ: ಜಲ ಜೀವನ್ ಮಿಷನ್ ಯೋಜನೆಯಡಿ ಎಲ್ಲಿಂದ ನೀರು ಬರುತ್ತದೆ ಅಂತಾ ಶಿವಕುಮಾರ್ ಸಹೋದರ ಕೇಳುತ್ತಿದ್ದರು, ಇವಾಗ ಎಲ್ಲ ಮನೆಗಳಿಗೂ ನಾವು ನೀರು ಕೊಟ್ಟಿಲ್ವಾ..? ಕಾಂಗ್ರೆಸ್ ಪಕ್ಷದ ನಾಯಕರು ಪ್ರಜಾಧ್ವನಿ ಕಾರ್ಯಕ್ರಮದ ಮೂಲಕ ಪ್ರವಾಸಕ್ಕೆ ಹೊರಟಿದ್ದಾರೆ. ಅವರ ಪಕ್ಷದೊಳಗೆ ಪ್ರಜಾಪ್ರಭುತ್ವ, ಪ್ರಜಾಧ್ವನಿಯನ್ನು ಗೌರವಿಸಿಲ್ಲ. ಕುಟಂಬ ಆಧಾರಿತ ನಿರ್ವಹಣೆ ಮಾಡುತ್ತಿರುವ ಪಕ್ಷ ಹೇಗೆ ಪ್ರಜಾಪ್ರಭುತ್ವ ಮೌಲ್ಯ, ಮೂಲ ಉದ್ದೇಶ ಈಡೇರಿಸಲು ಹೇಗೆ ಸಾಧ್ಯ? ಪ್ರಜಾಪ್ರಭುತ್ವದ ಮಹತ್ವವನ್ನೇ ಅರ್ಥ ಮಾಡಿಕೊಳ್ಳದೆ ಕಾರ್ಯ ಮಾಡುತ್ತಿರುವ ಪಕ್ಷ ಕಾಂಗ್ರೆಸ್ ಎಂದು ಟೀಕಿಸಿದರು.
ಕಾಂಗ್ರೆಸ್ ಆಧಾರ ರಹಿತ ಆರೋಪ ಮಾಡುತ್ತಿದೆ: ಕಾಂಗ್ರೆಸ್ನವರು ಬಿಜೆಪಿ ಬಗ್ಗೆ, ನಮ್ಮ ಹಲವಾರು ಕಾರ್ಯಕ್ರಮ ಮತ್ತು ಮಹದಾಯಿ ಬಗ್ಗೆ ಮಾತನಾಡಿದ್ದಾರೆ. ಮಹದಾಯಿ ಸಮಸ್ಯೆ ಬಗೆಹರಿಸಲು ಅವರಿಗೆ ಆಗಿರಲಿಲ್ಲ. ಈಗ ನಾವು ಪರಿಹರಿಸಿದ್ದೇವೆ. ಒಕ್ಕಲಿಗರ ನಿಗಮಕ್ಕೆ ಹಣ ಕೊಟ್ಟಿಲ್ಲ ಎನ್ನುವುದು ಸುಳ್ಳು ಆರೋಪ. ಅಧಿಕಾರದಲ್ಲಿದ್ದಾಗ ಸ್ವಾರ್ಥ ರಾಜಕಾರಣ, ಧರ್ಮ ವಿಭಜನೆ ಯತ್ನ, ಭ್ರಷ್ಟಾಚಾರ ಮಾಡಿದರು, ಲೋಕಾಯುಕ್ತ ಮುಚ್ಚಿದರು. ಈಗ ಅವರೇ ನಮ್ಮ ವಿರುದ್ಧ 40 ಪರ್ಸೆಂಟ್ ಭ್ರಷ್ಟಾಚಾರ ಎನ್ನುತ್ತಿದ್ದಾರೆ. ಸಾಕ್ಷಿಯಿಲ್ಲದೇ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಈ ರೀತಿ ಆರೋಪ ಮಾಡಿದವರು ಜೈಲಿಗೆ ಹೋಗಿದ್ದಾರೆ.