ಬೆಂಗಳೂರು: ಒಕ್ಕಲಿಗರ ಕುರಿತು ವಿವಾದಾತ್ಮಕ ಹೇಳಿಕೆ ನೀಡಿರುವ ವಿಚಾರವಾದಿ ಪ್ರೊ. ಭಗವಾನ್ ಅವರನ್ನು ಸರ್ಕಾರ ಬಂಧಿಸಬೇಕೆಂದು ಮಾಜಿ ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಒತ್ತಾಯಿಸಿದ್ದಾರೆ. ತಮ್ಮ ನಿವಾಸದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಮಾಜದಲ್ಲಿ ಗೊಂದಲ ಉಂಟು ಮಾಡ್ತಾ ಇದ್ದಾರೆ. ಶಿಷ್ಟ ರಕ್ಷಕ ಚಾಮುಂಡಿಯನ್ನು ವಿರೋಧ ಮಾಡುತ್ತಿದ್ದಾರೆ. ಮಹಿಷಾನ ಪೂಜಿಸ್ತಾರೆ. ಇವರು ಜನರ ಭಾವನೆಗಳನ್ನು ಕೆಣಕುತ್ತಿದ್ದಾರೆ. ಈ ಭಗವಾನ್ ಬುದ್ಧಿ ಏರುಪೇರಾಗಿದೆ ಎಂದು ಕಿಡಿಕಾರಿದರು.
ಒಕ್ಕಲಿಗರು ಸುಸಂಸ್ಕೃತರು, ಒಕ್ಕಲುತನದ ಬಗ್ಗೆ ಮಾತಾಡ್ತಿಯಾ ನೀನು?, ನಿನಗೆ ಶಕ್ತಿ ತಾಕತ್ತು ಇದ್ದರೆ, ಭಗವಂತ ನರ ಕೊಟ್ಟಿದ್ದರೆ ನೀನು ಒಬ್ಬನೇ ಮಾತನಾಡಬೇಕು. ಕುವೆಂಪು ಹೆಸರು ಉಲ್ಲೇಖ ಮಾಡಬಾರದು. ನೀನು ಒಬ್ಬನೇ ಮಾತನಾಡು, ಆಮೇಲೆ ನೋಡುವಂತೆ ಏನಾಗುತ್ತೆ ಅಂತ ಎಂದು ಭಗವಾನ್ ಅವರ ವಿರುದ್ಧ ಏಕವಚನದಲ್ಲೇ ಅಶ್ವತ್ಥನಾರಾಯಣ ಹರಿಹಾಯ್ದರು.
ಐಟಿ ದಾಳಿ ವಿಚಾರಚಾಗಿ ಪ್ರತಿಕ್ರಿಯಿಸಿ, ಹಾದಿ ಬೀದಿಯಲ್ಲಿ ಹೋಗುವವರಿಗೆಲ್ಲಾ ಹೇಳುವುದಕ್ಕೆ ಆಗುವುದಿಲ್ಲವೆಂದು ಡಿ. ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಿ. ಕೆ. ಶಿವಕುಮಾರ್ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಯಾಕೆ ಮುಟ್ಟಿ ನೋಡಿಕೊಳ್ತಾರೆ. ಹಾದಿ ಬೀದಿಯಲ್ಲಿ ಇರೋರಿಗೆ ಉತ್ತರ ಕೊಡೋದು ಬೇಡಪ್ಪ. ಜನರಿಗೆ ಉತ್ತರ ಕೊಡಪ್ಪ. 40% ಕಮೀಷನ್ ಅಂತ ಹೇಳಿ ಆರೋಪ ಮಾಡಿದವರ ಮನೆಯಲ್ಲೇ 42 ಕೋಟಿ ಹಣ ಸಿಕ್ಕಿದೆ. 40% ಕಮಿಷನ್ ತನಿಖೆ ಮಾಡುವುದಕ್ಕೆ ಕಮೀಷನ್ ನೇಮಕ ಮಾಡಿದವರು ಇವರು. ರಾಜಕೀಯ ಮಾಡ್ತಿದ್ದಾರೆ ಅಂತ ಹೇಳುವ ನೀವು ಇನ್ನೆಂತವರು.? ಜವಾಬ್ದಾರಿ ಇದ್ದವರು ಹೇಳುವ ಮಾತಾ ಇದು? ಎಂದು ತಿರುಗೇಟು ನೀಡಿದರು.