ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆ ಹಾಗೂ ಭಾರತೀಯ ಶೈಕ್ಷಣಿಕ ಶ್ರೇಯಾಂಕ ಮತ್ತು ಜೇಷ್ಠತೆ ಕೇಂದ್ರವು (indian center for academic ranking and excellence) ಜಂಟಿಯಾಗಿ ರಾಜ್ಯದ ವಿಶ್ವ ವಿದ್ಯಾಲಯಗಳ ರೇಟಿಂಗ್ ಫ್ರೇಮ್ ಅನ್ನು ಇಂದು ಬಿಡುಗಡೆ ಮಾಡಿತು.
ವಿವಿ ರ್ಯಾಂಕಿಂಗ್ನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದು : ಅಶ್ವಥ್ ನಾರಾಯಣ್ ವಿಶ್ವವಿದ್ಯಾಲಯಗಳಲ್ಲಿ ಬೋಧನೆ, ಮೂಲಸೌಕರ್ಯ, ಆವಿಷ್ಕಾರ, ಸಂಶೋಧನೆ ಸೇರಿದಂತೆ ಸಾಮಾಜಿಕ ಪ್ರಜ್ಞೆ ಹೀಗೆ ನಾನಾ ಪ್ರಕಾರಗಳ ಮೂಲಕ ರಾಜ್ಯದ ವಿವಿಗಳಿಗೆ ಶ್ರೇಯಾಂಕವನ್ನು ನೀಡಲಾಗುತ್ತಿದೆ. ಸ್ಥಾಪಿತ ವಿಶ್ವವಿದ್ಯಾಲಯ, ಯುವ ವಿವಿ, ಹೊಸತು ವಿವಿ, ವಿಶೇಷ ವಿವಿಯ ಒಟ್ಟು 4 ಆಯಾಮಗಳಲ್ಲಿ ರಾಜ್ಯದ ಖಾಸಗಿ ಮತ್ತು ಸರ್ಕಾರಿ ವಿಶ್ವ ವಿದ್ಯಾಲಯಗಳಿಗೆ ಪ್ರಶಸ್ತಿ ನೀಡಿಲಾಯಿತು.
ಪ್ರಶಸ್ತಿ ನೀಡಿ ಬಳಿಕ ಮಾತಾನಾಡಿದ ಸಚಿವ ಅಶ್ವಥ್ ನಾರಾಯಣ್, ರಾಜಕೀಯಕ್ಕೂ-ವಿಶ್ವವಿದ್ಯಾಲಯಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ರಾಜಕೀಯ ಕ್ಷೇತ್ರಕ್ಕಿಂತ ಹೆಚ್ಚು ವಿಶ್ವ ವಿದ್ಯಾಲಯಗಳಲ್ಲಿಯೇ ರಾಜಕೀಯ ನಡೆಯುತ್ತೆ ಎಂದು ವಿಷಾದ ವ್ಯಕ್ತಪಡಿಸಿದರು. ವಿಶ್ವವಿದ್ಯಾಲಯ ಅಂದರೆ ವ್ಯಕ್ತಿತ್ವ ನಿರ್ಮಾಣ ಮಾಡುವ ಜಾಗ. ಆದರೆ ಅಲ್ಲೇ ಕುಲಪತಿಗಳ ನೇಮಕಾತಿಯಲ್ಲಿ ಉತ್ತಮ ವ್ಯವಸ್ಥೆ ಇಲ್ಲ ಅಂದರೆ, ಗುಣಮಟ್ಟ ಹಾಗೂ ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲವೆಂದು ತಿಳಿಸಿದರು. ಈ ಬಾರಿ ಖಾಸಗಿ ಏಜೆನ್ಸಿಯು ಶಿಕ್ಷಣ ಪರಿಷತ್ನೊಂದಿಗೆ ಜಂಟಿಯಾಗಿ ರ‍್ಯಾಂಕಿಂಗ್ ನೀಡಿದ್ದು, ವಿವಿಗಳ ರೇಟಿಂಗ್ನಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗುವುದೆಂದು ಸಚಿವರು ತಿಳಿಸಿದರು.
ಇದೇ ವೇಳೆ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ರೇಟಿಂಗ್ ಫ್ರೇಮ್ ವರ್ಕ್(KSURF)-2019 ರ ವರದಿಯನ್ನು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಬಿಡುಗಡೆ ಮಾಡಿದ್ದು, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜಕುಮಾರ್ ಕತ್ರಿ ಹಾಗೂ ರಾಜ್ಯದ ಎಲ್ಲ ವಿಶ್ವ ವಿದ್ಯಾಲಯಗಳ ಕುಲಪತಿಗಳು, ರಿಜಿಸ್ಟರ್‌ಗಳು ಸಾಥ್ ನೀಡಿದರು.