ಕರ್ನಾಟಕ

karnataka

ETV Bharat / state

'ಮೇ ತಿಂಗಳ ವೇಳೆಗೆ ಕೆ.ಸಿ‌.ಜನರಲ್ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರ ಸಿದ್ಧ' - ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ಕೊಟ್ಟು ಪರಿಶೀಲಿಸಿದ ಅಶ್ವತ್ಥನಾರಾಯಣ

ತಾಯಿ ಮತ್ತು ಮಕ್ಕಳ ಶುಶ್ರೂಷೆಗಾಗಿ 200 ಹಾಸಿಗೆಗಳ ಆಸ್ಪತ್ರೆ ನಿರ್ಮಿಸುವ ಯೋಜನೆ ಇದ್ದು, ಅದನ್ನು ಯಾವ ಜಾಗದಲ್ಲಿ ನಿರ್ಮಿಸಬೇಕೆಂಬ ಕುರಿತು ಜಾಗದ ಪರಿಶೀಲನೆಯನ್ನು ಕೂಡ ಸಚಿವರು ನಡೆಸಿದರು. ಇದೇ ವೇಳೆ 50 ಹಾಸಿಗೆಗಳ ಮಕ್ಕಳ ತೀವ್ರ ನಿಗಾ ಘಟಕದ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು.

'ಮೇ ತಿಂಗಳ ವೇಳೆಗೆ ಕೆ ಸಿ‌ ಜನರಲ್ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರ ಸಿದ್ಧ'
'ಮೇ ತಿಂಗಳ ವೇಳೆಗೆ ಕೆ ಸಿ‌ ಜನರಲ್ ಆಸ್ಪತ್ರೆಯಲ್ಲಿ ಜಯದೇವ ಹೃದ್ರೋಗ ಚಿಕಿತ್ಸಾ ಕೇಂದ್ರ ಸಿದ್ಧ'

By

Published : Apr 13, 2022, 9:32 PM IST

ಬೆಂಗಳೂರು: ಜಯದೇವ ಆಸ್ಪತ್ರೆ ಸಹಯೋಗದಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸಾ ಕೇಂದ್ರ ಸ್ಥಾಪನೆಯಾಗಲಿದ್ದು, ಮೇ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ಸಚಿವ ಸಿ.ಎನ್.ಅಶ್ವತ್ಥನಾರಾಯಣ ತಳಿಸಿದರು. ಇಂದು ಕೆ.ಸಿ.ಜನರಲ್ ಆಸ್ಪತ್ರೆಗೆ ಭೇಟಿ ಕೊಟ್ಟು ಆಸ್ಪತ್ರೆ ಅಭಿವೃದ್ಧಿಗಾಗಿ ನಡೆಯಲಿರುವ ವಿವಿಧ ಕಾರ್ಯಗಳ ಬಗ್ಗೆ ಪರಿಶೀಲಿಸಿದರು. ಈ ವೇಳೆ ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಸಾಥ್ ನೀಡಿದರು.

ತಾಯಿ ಮತ್ತು ಮಕ್ಕಳ ಶುಶ್ರೂಷೆಗಾಗಿ 200 ಹಾಸಿಗೆಗಳ ಆಸ್ಪತ್ರೆ ನಿರ್ಮಿಸುವ ಯೋಜನೆ ಇದ್ದು, ಅದನ್ನು ಯಾವ ಜಾಗದಲ್ಲಿ ನಿರ್ಮಿಸಬೇಕೆಂಬ ಕುರಿತು ಜಾಗದ ಪರಿಶೀಲನೆಯನ್ನು ಕೂಡ ಸಚಿವರು ನಡೆಸಿದರು. ಇದೇ ವೇಳೆ 50 ಹಾಸಿಗೆಗಳ ಮಕ್ಕಳ ತೀವ್ರ ನಿಗಾ ಘಟಕದ ಕಾಮಗಾರಿಯ ಪ್ರಗತಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಆಸ್ಪತ್ರೆಯ ಆವರಣದಲ್ಲೇ ನಿಮ್ಹಾನ್ಸ್ ಸಹಯೋಗದಲ್ಲಿ ಟ್ರಾಮಾ ಕೇರ್ ಸೆಂಟರ್ ಅನ್ನು ಕೂಡ ಸ್ಥಾಪಿಸಲಾಗುವುದು. ಈ ಸಂಬಂಧ ಯೋಜನೆಯ ರೂಪುರೇಷೆಗಳೆಲ್ಲ ಸಿದ್ಧವಾಗಿದೆ. ಆದಷ್ಟು ತ್ವರಿತವಾಗಿ ಇದರ ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಇದರಿಂದಾಗಿ ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ಲಭ್ಯವಾಗಲಿದೆ ಎಂದರು.

ಇದನ್ನೂ ಓದಿ: ಕೆಜಿಎಫ್ ಚಾಪ್ಟರ್​-2​: ಯಶ್​, ಸಂಜಯ್​ ದತ್​​, ರವೀನಾ​, ಶ್ರೀನಿಧಿ ಪಡೆದ ಸಂಭಾವನೆ ವಿವರ ಹೀಗಿದೆ..

ಮಣಿಪಾಲ್ ಆಸ್ಪತ್ರೆ ನೆರವಿನೊಂದಿಗೆ ‘ಬೆಂಗಳೂರು ಒನ್’ ಕೇಂದ್ರವಿರುವ ಬಿಬಿಎಂಪಿ ಕಟ್ಟಡದಲ್ಲಿ ಸ್ಥಾಪನೆಯಾಗಲಿರುವ ಹೈಟೆಕ್ ಪ್ರಯೋಗಾಲಯದ ಸಂಬಂಧ ಆಗಿರುವ ಕೆಲಸದ ಪ್ರಗತಿಯನ್ನು ಖುದ್ದು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

For All Latest Updates

TAGGED:

ABOUT THE AUTHOR

...view details