ಕರ್ನಾಟಕ

karnataka

ETV Bharat / state

ನಾಲಿಗೆ ಇದೆ ಅಂತಾ ಹೇಗೆ ಬೇಕೋ ಹಾಗೆ ಮಾತಾಡ್ತಾರೆ: ಹೆಚ್​ಡಿಕೆಗೆ ಅಶ್ವತ್ಥ್​​​​ ನಾರಾಯಣ್​​ ಟಾಂಗ್​​

ರಾಜ್ಯದಲ್ಲಿ ರಾಜಕೀಯ ನಾಯಕರ ಮೇಲೆ ಸುಲಭವಾಗಿ ಹಲ್ಲೆಯಾಗುತ್ತಿರುವುದಕ್ಕೆ ಹಿಂದಿನ ಸರ್ಕಾರಗಳೇ ಕಾರಣ ಎಂದು ಡಿಸಿಎಂ ಅಶ್ವತ್ಥ್​​ ನಾರಾಯಣ್ ಆರೋಪಿಸಿದ್ದಾರೆ.

Ashwath narayan
ಅಶ್ವಥ್ ನಾರಾಯಣ್

By

Published : Jan 23, 2020, 12:14 PM IST

ಮೈಸೂರು:ರಾಜ್ಯದಲ್ಲಿ ರಾಜಕೀಯ ನಾಯಕರ ಮೇಲೆ ಸುಲಭವಾಗಿ ಹಲ್ಲೆಯಾಗುತ್ತಿರುವುದಕ್ಕೆ ಹಿಂದಿನ ಸರ್ಕಾರಗಳೇ ಕಾರಣ ಎಂದು ಡಿಸಿಎಂ ಅಶ್ವತ್ಥ್​​ ನಾರಾಯಣ್ ಆರೋಪಿಸಿದ್ದಾರೆ.

ಇಂದು ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಆಶ್ವತ್ಥ್​​​ ನಾರಾಯಣ್, ಇಂದು ರಾಜ್ಯದಲ್ಲಿ ರಾಜಕೀಯ ನಾಯಕರ ಮೇಲೆ ಸುಲಭವಾಗಿ ಹಲ್ಲೆಯಾಗುತ್ತಿರುವುದಕ್ಕೆ ಹಿಂದಿನ ಸರ್ಕಾರಗಳೇ ಕಾರಣ. ಸಮಾಜಘಾತುಕ ಚಟುವಟಿಕೆಗಳನ್ನು ಮಾಡಿದವರ ಮೇಲೆ ಕಡಿವಾಣ ಹಾಕುವ ಸಂದರ್ಭದಲ್ಲಿ ಅವರ ಮೇಲಿನ ಕೇಸನ್ನು ವಾಪಸ್ ಪಡೆದು ಅವರ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ್ದಾರೆ. ಹೀಗಾಗಿ ಅವರಿಂದು ಕಾನೂನು ಮೀರಿ ಬೆಳೆದಿದ್ದಾರೆ ಎಂದರು.

ಅಶ್ವತ್ಥ್​ ನಾರಾಯಣ್, ಡಿಸಿಎಂ

ಅವರಿಂದಲೇ ಈ ರೀತಿಯ ಚಟುವಟಿಕೆಗಳು ನಡೆಯುತ್ತಿದ್ದು, ಇದನ್ನು ನಿಯಂತ್ರಿಸಲು ಶೀಘ್ರದಲ್ಲೇ ನಮ್ಮ ಸರ್ಕಾರ ಹೊಸ ಕಾನೂನು ತರಲಿದೆ. ಇಂತಹ ಸಂಘಟನೆಗಳನ್ನು‌ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ ಶೀಘ್ರವೇ ವರದಿ ಸಲ್ಲಿಸುತ್ತೇವೆ ಎಂದರು.

ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾಲಿಗೆ ಇದೆ ಎಂದು ಹೇಗೆ ಬೇಕೋ ಹಾಗೆ ಮಾತನಾಡುತ್ತಾರೆ. ಇದಕ್ಕೆ ಯಾವುದೇ ಅರ್ಥ ಇಲ್ಲ. ಮಂಗಳೂರಿನಲ್ಲಿ ಬಾಂಬ್ ಹಾಕಿದ ವ್ಯಕ್ತಿ ಸ್ವತಃ ಒಪ್ಪಿಕೊಂಡಿದ್ದಾನೆ. ಇಂತಹ ಸಮಯದಲ್ಲಿ ವಿರೋಧ ಪಕ್ಷದವರು ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದರು. ಸಚಿವ ಸಂಪುಟ ವಿಸ್ತರಣೆಯನ್ನು ಸೂಕ್ತ ದಿನ ನೋಡಿಕೊಂಡು ಇದೇ ತಿಂಗಳು ಸಿಎಂ ಯಡಿಯೂರಪ್ಪ ವಿಸ್ತರಣೆ ಮಾಡುತ್ತಾರೆ ಎಂದರು.

ABOUT THE AUTHOR

...view details