ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ, ಹಲ್ಲೆ ಸರ್ವೇ ಸಾಮಾನ್ಯವಾಗಿತ್ತು ಕಾಂಗ್ರೆಸ್ ಆಡಳಿತದಲ್ಲಿ ಹೆಚ್ಚಿನ ಉತ್ತೇಜನ ಕೊಡಲಾಗಿತ್ತು ಕಾನೂನು ಸುವ್ಯವಸ್ಥೆ ಇಲ್ಲದಿದ್ದ ವಿಚಾರ ಕೂಡಾ ಪರೇಶ್ ಮೇಸ್ತಾ ಸಾವಿಗೆ ಕಾರಣ ಆಗಿತ್ತು ಸಾಕ್ಷಿ ನಾಶ ಆಗಿದೆಯೋ ಏನೋ ಎಂಬುದನ್ನು ಕೂಡಾ ನೋಡುವ ಕೆಲಸ ನಮ್ಮ ಪಕ್ಷದಿಂದ ಆಗುತ್ತದೆ ಎಂದು ಸಚಿವ ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಮಲ್ಲೇಶ್ವರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೇಶ್ ಮೇಸ್ತಾ ವರದಿ ವಿಚಾರ ಕುರಿತು ತನಿಖೆ ನಡೆದು ವರದಿ ಈಗ ತಾನೆ ಬಂದಿದೆ. ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಹೆಚ್ಚಿನ ಮಾಹಿತಿ ಪಡೆಯುತ್ತೇವೆ. ಪಕ್ಷದ ನಾಯಕರು ನಿಲುವು ತಿಳಿಸಿದ್ದಾರೆ. ಒಟ್ಟಾರೆ ಹಿಂದೂಗಳು, ನಮ್ಮ ಪಕ್ಷದ ಕಾರ್ಯಕರ್ತರ ಹತ್ಯೆ, ಹಲ್ಲೆ ಕಾಂಗ್ರೆಸ್ ಅವಧಿಯಲ್ಲಿ ಸರ್ವೇ ಸಾಮಾನ್ಯವಾಗಿತ್ತು.
ಸಾಕಷ್ಟು ಪ್ರಾಣ ಹಾನಿಯಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಹೆಚ್ಚಿನ ಕಾನೂನು ಸುವ್ಯವಸ್ಥೆ ಸರಿ ಇಲ್ಲದ ಕಾರಣವಾಗಿ ಹತ್ಯೆ ನಡೆದಿದೆ. ಪರೇಶ್ ಮೇಸ್ತಾ ಸಾವಿನ ತನಿಖೆ ನಡೆಯುತ್ತಲೇ ಇದೆ. ವರದಿ ಪೂರ್ಣ ಬರಲಿ ಎಂದರು. ಬಿಜೆಪಿ ಮುಖಕ್ಕೆ ಬಡಿದ ತಪರಾಕಿ ಎಂಬ ಸಿದ್ದರಾಮಯ್ಯ ಟ್ವೀಟ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ, ಬೇರೆ ಹಿಂದೂ ಕಾರ್ಯಕರ್ತರ ಹತ್ಯೆಗೆ ಸಿದ್ದರಾಮಯ್ಯ ಜವಾಬ್ದಾರಿ ತೆಗೆದುಕೊಳ್ಳುತ್ತಾರಾ? ಹಾಗೊಂದು ವೇಳೆ ಸಿದ್ದರಾಮಯ್ಯ ಜವಾಬ್ದಾರಿ ತೆಗೆದುಕೊಂಡರೆ ಉಳಿದ ಚರ್ಚೆ ಮಾಡೋಣ ಎಂದರು.
ಆರ್ಥಿಕತೆಯಲ್ಲಿ ಇಂಗ್ಲೆಂಡ್‌ಗಿಂತ ಮುಂದಿದ್ದೇವೆ:ದತ್ತಾತ್ರೇಯ ಹೊಸಬಾಳೆ ಅಸಮಾನತೆ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಕೋವಿಡ್ ಬಂದ ನಂತರ ಸಮಾಜದಲ್ಲಿ ಹಲವು ಚಟುವಟಿಕೆ ನಿಂತಿದ್ದವು. ಆಗ ಬೇಡಿಕೆ ಕೊರತೆ, ನಿಷ್ಕ್ರಿಯತೆ ಆಗಿತ್ತು, ಬೇಡಿಕೆ ಹೆಚ್ಚಿತ್ತು. ಸವಾಲಿನ ಸಂದರ್ಭದಲ್ಲಿ ತಮ್ಮ ವಹಿವಾಟು ಮಾಡಿಕೊಡಲು ಅವಕಾಶ ಇತ್ತು. ಸವಾಲುಗಳನ್ನ ಬಗೆಹರಿಸೋ ಕ್ರಮ ಆಗಿದೆ.