ಕರ್ನಾಟಕ

karnataka

ETV Bharat / state

ಸಂಧಾನಕ್ಕೆ ಕರೆದು ಮಹಿಳೆಯರ ಮೇಲೆ ಪಿಎಸ್ಐ ಹಲ್ಲೆ ಆರೋಪ - kannada news

ಹೆಂಡತಿಯ ಮೇಲೆ ಪಿಎಸ್ಐ ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕನಕಪುರ ಪೊಲೀಸ್​ ಠಾಣೆಯಲ್ಲಿ ನಡೆದಿದೆ. ಈ ಕುರಿತು ರಾಮನಗರ ಜಿಲ್ಲಾ ಎಸ್ಪಿಗೆ ದೂರು ನೀಡಿದ್ದೇವೆ ಆದ್ರೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ವೃದ್ಧ ದಂಪತಿ ಹಾಗೂ ಕುಟುಂಬದವರು ಕಣ್ಣೀರು ಹಾಕಿದ್ದಾರೆ

ಮಹಿಳೆಯರ ಮೇಲೆ ಪಿಎಸ್ಐ ಹಲ್ಲೆ ಆರೋಪ

By

Published : Jun 6, 2019, 4:59 PM IST

ಬೆಂಗಳೂರು :ಅಸಹಾಯಕ ಮಹಿಳೆಯರ ಮೇಲೆ ಪಿಎಸ್ಐ ದರ್ಪ‌ ತೋರಿದ್ದಾರೆ ಎಂದು ಆರೋಪಿಸಿ ವೃದ್ಧೆ ಎಸ್​ಐ ವಿರುದ್ಧವೇ ಆರೋಪ ಮಾಡಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಮುನಿ ರುದ್ರಾಚಾರಿ ಎಂಬುವವರಿಂದ ಶಿವಲಿಂಗಾಚಾರಿ ಎಂಬುವವರು ಕನಕಪುರದಲ್ಲಿ ಮನೆ ಭೋಗ್ಯಕ್ಕೆ ಪಡೆದಿದ್ದರು, ಏಕಾಏಕಿ ಮನೆ ಖಾಲಿ ಮಾಡುವಂತೆ ಶಿವಲಿಂಗಾಚಾರಿ ತಾಕೀತು ಮಾಡಿದ್ದು, ಪ್ರಕರಣ ಠಾಣೆ ಮೆಟ್ಟಿಲೇರಿತ್ತು. ಈ ಕುರಿತಾಗಿ ವಿಚಾರಣೆ ನಡೆಸಲು ಗಿರಿಚಾಂಬ ಮತ್ತು ಲಕ್ಷ್ಮೀದೇವಿ ಎಂಬ ಮಹಿಳೆಯರನ್ನು ಠಾಣೆಗೆ ಕರೆಸಿದ್ದ ಕನಕಪುರ ಪೊಲೀಸ್ ಠಾಣೆಯ ಪಿಎಸ್ಐ ಅನಂತ ರಾಮ್ ಮಹಿಳೆಯರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮಹಿಳೆಯರ ಮೇಲೆ ಪಿಎಸ್ಐ ಹಲ್ಲೆ ಆರೋಪ

ಸಂಧಾನ ಮಾತುಕತೆ್ಗೆ ಎಂದು ಕರೆಸಿ ಮಗಳು, ಹೆಂಡತಿಯ ಮೇಲೆ ಪಿಎಸ್ಐ ಅವಾಚ್ಯ ಶಬ್ದಗಳಿಂದ ನಿಂಧಿಸಿ ಹಲ್ಲೆ ಮಾಡಿದ್ದಾರೆ. ಈ ಕುರಿತು ರಾಮನಗರ ಜಿಲ್ಲಾ ಎಸ್ಪಿಗೆ ದೂರು ನೀಡಿದ್ದೇವೆ ಆದ್ರೂ ನಮಗೆ ನ್ಯಾಯ ಸಿಕ್ಕಿಲ್ಲ ಎಂದು ವೃದ್ಧ ದಂಪತಿ ಹಾಗೂ ಕುಟುಂಬದವರು ಕಣ್ಣೀರು ಹಾಕಿದ್ರು. ಅಲ್ಲದೆ, ಪಿಎಸ್ಐ ದರ್ಪಕ್ಕೆ ಹೆದರಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಗೆ ಬಂದಿದ್ದಾರೆ.

ಮಹಿಳೆಯರ ಮೇಲೆ ಪಿಎಸ್ಐ ಹಲ್ಲೆ ಆರೋಪ
ಪಿಎಸ್ಐ ಅನಂತ್ ರಾಮ್

ABOUT THE AUTHOR

...view details