ಬೆಂಗಳೂರು:ಹುಟ್ಟಿದ 3 ದಿನದಲ್ಲೇ ಹೆಣ್ಣು ಮಗುವನ್ನು ಪಾಪಿಗಳು ಸ್ಮಶಾನದಲ್ಲಿ ಎಸೆದು ಹೋಗಿರುವ ಘಟನೆ ಯಲಹಂಕದ ಅಲ್ಲಾಳಸಂದ್ರದಲ್ಲಿ ಬೆಳಕಿಗೆ ಬಂದಿದೆ. ಈ ಶಿಶುವನ್ನು ಆಶಾ ಕಾರ್ಯಕರ್ತೆ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಸ್ಮಶಾನದಲ್ಲಿ ಎಸೆದೋಗಿದ್ದ ನವಜಾತ ಶಿಶು ಕುರಿತು ಆಶಾ ಕಾರ್ಯಕರ್ತೆ ಮಮತಾ ಅವರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಕೂಡಲೇ ಎಚ್ಚೆತ್ತುಕೊಂಡ ಮಮತಾ ಅವರು ಪೊಲೀಸರಿಗೆ ಮಾಹಿತಿ ನೀಡಿ, ನಂತರ ಸ್ಮಶಾನದಲ್ಲಿ ಪತ್ತೆಯಾದ ಶಿಶುವನ್ನು ಕೂಡಲೇ ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದುಕೊಂಡು ಬಂದು ಸೂಕ್ತ ಚಿಕಿತ್ಸೆ ಕೊಡಿಸಿದ್ದರು. ಇದಾದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
3 ದಿನದ ಹೆಣ್ಣು ಮಗುವನ್ನು ಸ್ಮಶಾನದಲ್ಲಿ ಎಸೆದು ಹೋದ ಪಾಪಿಗಳು...! - ಸ್ಮಶಾನದಲ್ಲಿ ಹೆಣ್ಣು ಮಗು ಪತ್ತೆ
ಸ್ಮಶಾನದಲ್ಲಿ ಎಸೆದು ಹೋಗಿದ್ದ ಮೂರು ದಿನದ ಹೆಣ್ಣು ಮಗುವನ್ನು ಆಶಾ ಕಾರ್ಯಕರ್ತೆ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
Baby
ಸದ್ಯ ಕೊರೊನಾಕ್ಕೆ ಸಂಬಂಧಿಸಿದ ವೈದ್ಯಕೀಯ ಚಿಕಿತ್ಸೆ ಕೊಡಿಸಲಾಗಿದ್ದು, ಶಿಶು ಆರೋಗ್ಯವಾಗಿದೆ. ನಂತರ ಶಿಶುವನ್ನು ಕೆ.ಆರ್. ಪುರದಲ್ಲಿರುವ ಶಿಶು ಮಂದಿರಕ್ಕೆ ಕಳುಹಿಸಿಕೊಡಲಾಗಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತ ಪರಿಣಾಮ ಶಿಶು ಪ್ರಾಣಾಪಾಯದಿಂದ ಪಾರಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಮಶಾನದ ಬಳಿ ಸಿಸಿ ಕ್ಯಾಮರಾ ಇಲ್ಲದ ಕಾರಣ ಆರೋಪಿಗಳ ಬಗ್ಗೆ ಸೂಕ್ತ ಮಾಹಿತಿ ಸಿಕ್ಕಿಲ್ಲ. ಸದ್ಯ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
Last Updated : Aug 5, 2020, 2:03 PM IST