ಬೆಂಗಳೂರು:ಮಸಿ ಬಳಿಯುವುದು ಕನ್ನಡದ ಸಂಸ್ಕೃತಿ ಅಲ್ಲ ಎಂದು ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಭಗವಾನ್ ಮುಖಕ್ಕೆ ಮಸಿ: ಸಚಿವ ಅರವಿಂದ ಲಿಂಬಾವಳಿ ಖಂಡನೆ - Bengaluru Latest news
ಹಿರಿಯ ಸಾಹಿತಿ ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಅರವಿಂದ ಲಿಂಬಾವಳಿ, ಇದು ದುರದೃಷ್ಟಕರ ಘಟನೆ ಎಂದಿದ್ದಾರೆ.
![ಭಗವಾನ್ ಮುಖಕ್ಕೆ ಮಸಿ: ಸಚಿವ ಅರವಿಂದ ಲಿಂಬಾವಳಿ ಖಂಡನೆ Arvind limbavali](https://etvbharatimages.akamaized.net/etvbharat/prod-images/768-512-10501130-151-10501130-1612446035277.jpg)
ಸಚಿವ ಅರವಿಂದ ಲಿಂಬಾವಳಿ
ಹಿರಿಯ ಸಾಹಿತಿ ಕೆ.ಎಸ್.ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಇದು ದುರದೃಷ್ಟಕರ ಘಟನೆ ಎಂದರು.
ತಾತ್ವಿಕ ಭಿನ್ನಾಭಿಪ್ರಾಯಗಳು ದೈಹಿಕ ಹಲ್ಲೆ, ದೈಹಿಕ ಹಿಂಸೆ ರೂಪ ತಾಳಬಾರದು. ಇಂತಹ ಕೃತ್ಯಗಳನ್ನು ನಾನು ಖಂಡಿಸುತ್ತೇನೆ. ಹಾಗೆಯೇ ಮಸಿ ಬಳಿಯವುದು ಕನ್ನಡದ ಸಂಸ್ಕೃತಿ ಅಲ್ಲ ಎಂದರು.
Last Updated : Feb 4, 2021, 7:42 PM IST