ಕರ್ನಾಟಕ

karnataka

ETV Bharat / state

ಪ್ರಚಾರಕ್ಕಾಗಿ ಅರವಿಂದ್ ಬೆಲ್ಲದ್ ಫೋನ್ ಟ್ಯಾಪಿಂಗ್ ಆರೋಪ: ರೇಣುಕಾಚಾರ್ಯ ಕಿಡಿ - ಶಾಸಕ ಅರವಿಂದ್ ಬೆಲ್ಲದ್

ಅರವಿಂದ್ ಬೆಲ್ಲದ್ ಪ್ರಚಾರಕ್ಕಾಗಿ ಕೆಲ ಹೇಳಿಕೆ ನೀಡುತ್ತಿದ್ದಾರೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್​ ಸಿಂಗ್​ ಹಾಗೂ ಹೈಕಮಾಂಡ್​ಗೆ ಸಿಎಂ ಯಡಿಯೂರಪ್ಪ ದಕ್ಷತೆ ಗೊತ್ತಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.

ರೇಣುಕಾಚಾರ್ಯ ಕಿಡಿ
ರೇಣುಕಾಚಾರ್ಯ ಕಿಡಿ

By

Published : Jun 17, 2021, 3:30 PM IST

ಬೆಂಗಳೂರು: ಅರವಿಂದ್ ಬೆಲ್ಲದ್ ಅವರು ಫೋನ್ ಟ್ಯಾಪ್ ಆಗ್ತಿದೆ ಎಂಬ ಆರೋಪ ಕೇವಲ ಪ್ರಚಾರಕ್ಕಾಗಿ ಹೇಳಿರುವ ಮಾತು. ಸೂಟು ಬೂಟು ಹೊಲಿಸಿಕೊಂಡು ಸಿಎಂ ಆಗುವ ಕನಸು ಕಾಣ್ತಿದ್ದಾರೆ. ಹಾಗಾಗಿ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ತಿರುಗೇಟು ನೀಡಿದ್ದಾರೆ.

ಅರವಿಂದ್​ ಬೆಲ್ಲದ್​ ವಿರುದ್ಧ ರೇಣುಕಾಚಾರ್ಯ ಕಿಡಿ

ಬಿಜೆಪಿ ಕಚೇರಿಯಲ್ಲಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನಂತರ ಮಾತನಾಡಿದ ಅವರು, ನಾವು ಮೊದಲು ಅಧ್ಯಕ್ಷರನ್ನು ಭೇಟಿ ಮಾಡಿ ಬಳಿಕ ಅರುಣ್ ಸಿಂಗ್ ಭೇಟಿ ಮಾಡಿದ್ದೇವೆ. ಸಿಎಂ ದಕ್ಷತೆ ಬಗ್ಗೆ ಅರುಣ್ ಸಿಂಗ್​ಗೆ ಗೊತ್ತಿದೆ. ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಉಸ್ತುವಾರಿ ಹೇಳಿದ್ದಾರೆ ಎಂದರು.

ಬೆಳಗಿನ ಸಭೆ ಬಗ್ಗೆ ಮಾತನಾಡಿ, ನಾನು ಬೆಳಗ್ಗೆ ಸಭೆ ಮಾಡಿಲ್ಲ. ಪಕ್ಷಕ್ಕೆ ದ್ರೋಹ ಮಾಡಲ್ಲ. ನಾನು ಉಪಹಾರ ಕೂಟ ಮಾಡಿದ್ದೇನೆ. ಸಂಘಟನೆ, ಸರ್ಕಾರದ ವಿಚಾರ ಮಾತನಾಡೋಕೆ ಸಭೆ ಮಾಡಿಲ್ಲ ಎಂದು ರೇಣುಕಾಚಾರ್ಯ ಸ್ಪಷ್ಟಪಡಿಸಿದ್ದಾರೆ.

ಓದಿ:ನಾಯಕತ್ವ ಗೊಂದಲ ಬೀದಿಯಲ್ಲಿ ಬಗೆಹರಿಸುವ ವಿಚಾರ ಅಲ್ಲ: ಸಿ.ಟಿ.ರವಿ

ABOUT THE AUTHOR

...view details