ಕರ್ನಾಟಕ

karnataka

ETV Bharat / state

ದರ್ಶನ್ ಬಗ್ಗೆ ಮಾತನಾಡೋವಷ್ಟು ದೊಡ್ಡವಳು ನಾನಲ್ಲ : ಅರುಣಾಕುಮಾರಿ - ನಟ ದರ್ಶನ್​ ಹೆಸರಿನಲ್ಲಿ 25 ಕೋಟಿ ರೂಪಾಯಿ ವಂಚನೆ ಪ್ರಕರಣ

ನಾನು ಯಾರಿಂದಲೂ ₹25 ಲಕ್ಷ ಪಡೆದಿಲ್ಲ. ಮೊದಲೇ ನನ್ನ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ಆರೋಪ ಸಾಬೀತು ಆಗೋವರೆಗೂ ಕಾಯುತ್ತೇನೆ. ನನಗೆ ಎಲ್ಲವನ್ನು ಹೇಳೋ ಅಗತ್ಯವಿಲ್ಲ..

Aruna Kumari
ಅರುಣಾಕುಮಾರಿ

By

Published : Jul 14, 2021, 7:19 PM IST

ನಟ ದರ್ಶನ್ ಹೆಸರಲ್ಲಿ 25 ಕೋಟಿ ರೂಪಾಯಿ ನಕಲಿ ಶ್ಯೂರಿಟಿ ಪ್ರಕರಣ ನಿನ್ನೆಗೆ ಸುಖಾಂತ್ಯ ಕಂಡಿದೆ. ಇದೀಗ ಕೇಸ್​​ನ ಪ್ರಮುಖ ರೂವಾರಿಯಾಗಿರುವ ಅರುಣಾಕುಮಾರಿ ಮಾಧ್ಯಮಗಳೆದುರು ಪ್ರತ್ಯಕ್ಷವಾಗಿದ್ದು, ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಇಂದು ಮಾಧ್ಯಮಗಳಿಗೆ ಅರುಣಾ ಕುಮಾರಿ ಪ್ರತಿಕ್ರಿಯೆ ನೀಡಿದ್ದು, ನನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳು. ಕಾನೂನಿನ ಪ್ರಕಾರ ಸಾಬೀತಾದ್ರೆ ಶಿಕ್ಷೆ ಅನುಭವಿಸುತ್ತೇನೆ. ನನಗೆ ನಿಜಕ್ಕೂ ಅನ್ಯಾಯವಾಗಿದೆ. ನಾನೊಬ್ಬ ಹೆಣ್ಣು, ನನ್ನನ್ನು ಬಿಟ್ಟು ಬಿಡಿ ಎಂದರು.

ಅರುಣಾಕುಮಾರಿ ಪ್ರತಿಕ್ರಿಯೆ

ಓದಿ: ವಂಚನೆ ಪ್ರಕರಣ ಸುಖಾಂತ್ಯ: ಸಿನಿಮಾ ಚರ್ಚೆಯಲ್ಲಿ ಬ್ಯುಸಿಯಾದ ನಟ ದರ್ಶನ್

ದರ್ಶನ್ ಸರ್​ ಬಗ್ಗೆ ಮಾತನಾಡೋವಷ್ಟು ದೊಡ್ಡವಳು ನಾನಲ್ಲ. ನಾನು ಯಾರಿಂದಲೂ ₹25 ಲಕ್ಷ ಪಡೆದಿಲ್ಲ. ಮೊದಲೇ ನನ್ನ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ. ಆರೋಪ ಸಾಬೀತು ಆಗೋವರೆಗೂ ಕಾಯುತ್ತೇನೆ. ನನಗೆ ಎಲ್ಲವನ್ನು ಹೇಳೋ ಅಗತ್ಯವಿಲ್ಲ ಎಂದು ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಓದಿ: ಕೇಸ್​ ಪೊಲೀಸ್ ಠಾಣೆಯಲ್ಲಿದೆ, ಅಲ್ಲಿಯೇ ಇತ್ಯರ್ಥವಾಗಲಿದೆ: ನಟ ದರ್ಶನ್​

ABOUT THE AUTHOR

...view details