ಕರ್ನಾಟಕ

karnataka

ETV Bharat / state

ವಿ.ಸೋಮಣ್ಣ ಪುತ್ರ ಅರುಣ್ ಸೋಮಣ್ಣಗೆ ತುಮಕೂರು ಜಿಲ್ಲಾ ಉಪಾಧ್ಯಕ್ಷನ ಹೊಣೆ

ವಿ.ಸೋಮಣ್ಣರನ್ನು ತಣ್ಣಗಾಗಿಸಲು ಪುತ್ರನಿಗೆ ಬಿಜೆಪಿ ಪಕ್ಷದಲ್ಲಿ ಉನ್ನತ ಜವಾಬ್ದಾರಿ ನೀಡಿದೆ.

BJP Tumkur District Vice President Arun Somanna
ಬಿಜೆಪಿ ತುಮಕೂರು ಜಿಲ್ಲಾ ಉಪಾಧ್ಯಕ್ಷ ಅರುಣ್​ ಸೋಮಣ್ಣ

By

Published : Mar 28, 2023, 10:37 PM IST

ಬೆಂಗಳೂರು :ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಸೂಚನೆಯ ಮೇರೆಗೆ ಅರುಣ್‌ ಸೋಮಣ್ಣರನ್ನು ಬಿಜೆಪಿ ತುಮಕೂರು ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ.‌ ಆ ಮೂಲಕ ಕಳೆದ ಹಲವಾರು ದಿನಗಳಿಂದ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡಿದ್ದ ಚಾಮರಾಜನಗರ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರನ್ನು ತಣ್ಣಗಾಗಿಸಲು ರಾಜ್ಯ ಬಿಜೆಪಿ ಮುಂದಾಗಿದೆ.

ವಿ. ಸೋಮಣ್ಣ ಹಾಗೂ ಅವರ ಪುತ್ರ ಅರುಣ್ ಸೋಮಣ್ಣ ಅವರು ಇತ್ತೀಚಿಗಿನ ರಾಜ್ಯ ಬಿಜೆಪಿಯಲ್ಲಿ ಆದ ಕೆಲ ಬೆಳವಣಿಗೆಯಿಂದ ಅಸಮಾಧಾನಗೊಂಡಿದ್ದು, ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ ವಿಜಯೇಂದ್ರ ವಿರುದ್ಧ ಮುನಿಸಿಕೊಂಡಿದ್ದರು. ಕೆಲವು ಕಡೆ ಬಹಿರಂಗವಾಗಿಯೇ ಸಚಿವ ವಿ‌. ಸೋಮಣ್ಣ ಮತ್ತು ಅರುಣ್ ಸೋಮಣ್ಣ ತನ್ನ ಅಸಾಮಾಧಾನವನ್ನು ಹೊರಹಾಕಿದ್ದರು.

ಇನ್ನು ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ರಂಗು ಜೋರಾಗಿದ್ದು, ಯಾವ ಕ್ಷೇತ್ರದಿಂದ ಯಾವ ಸ್ಪರ್ಧಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು ಎಂಬುದು ಎಂಬುದು ಜನರಲ್ಲಿ ಭಾರಿ ಕುತೂಹಲ ಕೆರಳಿಸಿರುವುವಂತದೆ. ಆದರೇ ಅರುಣ್ ಸೋಮಣ್ಣ ಹೆಸರು ಚಾಮರಾಜನಗರ ಹನೂರು ಹಾಗೂ ಗುಬ್ಬಿ ಕ್ಷೇತ್ರದಲ್ಲಿ ಕೇಳಿ ಬರುತ್ತಿತ್ತು. ಇದೀಗ ಅರುಣ್ ಸೋಮಣ್ಣರನ್ನು ಬಿಜೆಪಿ ತುಮಕೂರು ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಅರುಣ್ ಸೋಮಣ್ಣ ಅವರಿಗೆ ಈ ಜವಾಬ್ದಾರಿ ನೀಡುವ ಮೂಲಕ ಹೈ ಕಮಾಂಡ್ ಪ್ರಬಲ ಲಿಂಗಾಯತ ನಾಯಕನ ಮುನಿಸು ತಣಿಸಲು ಮುಂದಾಗಿದೆ.

ಈ ಹಿಂದೆ ಗುಬ್ಬಿ ಕ್ಷೇತ್ರದಲ್ಲಿ ಅರುಣ್ ಸೋಮಣ್ಣ ಅವರು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಸುದ್ದಿ ಕೇಳಿ ಬರುತ್ತಿದ್ದು, ಇದೇ ವೇಳೆ ಅವರನ್ನು ತುಮಕೂರು ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಿರುವುದು ಹಲವು ಕುತೂಹಲಗಳಿಗೆ ಕಾರಣವಾಗಿದೆ. ಅರುಣ್ ಸೋಮಣ್ಣಗೆ ಪಕ್ಷದಲ್ಲಿ ಜವಾಬ್ದಾರಿ ನೀಡುವ ಮೂಲಕ ಹೈಕಮಾಂಡ್ ವಿ.ಸೋಮಣ್ಣಗೆ ಸಮಾಧಾನ ಪಡಿಸುವ ಕೆಲಸಕ್ಕೆ ಮುಂದಾಗಿದೆ.

ದೆಹಲಿಗೆ ತೆರಳಿ ವಿ. ಸೋಮಣ್ಣ ಅಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿಯಾಗಿ ತಮ್ಮ ಅಸಮಾಧಾನದ ಬಗ್ಗೆ ಚರ್ಚೆ ನಡೆಸಿದ್ದರು. ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆ ಬಗ್ಗೆ ಸಮಾಲೋಚನೆ ನಡೆಸಿದ್ದರು.‌ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅರುಣ್ ಸೋಮಣ್ಣಗೆ ತುಮಕೂರು ಜಿಲ್ಲೆಯ ಉಪಾಧ್ಯಕ್ಷರನ್ನಾಗಿ ನೇಮಿಸಿ ಅಸಮಾಧಾನಕ್ಕೆ ಮದ್ದು ಅರೆಯುವ ಕೆಲಸ ಮಾಡಿದೆ.

ಸೋಮಣ್ಣ ಮನವೊಲಿಕೆ ಮುಂದಾಗಿದ್ದ ಕಮಲ ನಾಯಕರು :ಯಡಿಯೂರಪ್ಪ ಅವರನ್ನೇ ನಂಬಿ ಪಕ್ಷಕ್ಕೆ ಬಂದ ನನಗೆ ಪ್ರಸ್ತುತ ರಾಜಕೀಯ ವಿದ್ಯಮಾನಗಳಲ್ಲಿ ಸೋಮಣ್ಣಗೆ ಟಿಕೆಟ್ ಇಲ್ಲ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಪಕ್ಷದ ವಿರುದ್ಧ ಅಸಮಧಾನಗೊಂಡು ಪಕ್ಷದ ಜನ ಸಂಕಲ್ಪ ಯಾತ್ರೆಗಳಿಂದ ದೂರ ಉಳಿದು ಕ್ಷೇತ್ರದಲ್ಲಿ ಸುತ್ತಾಡುತ್ತಿರುವ ವಸತಿ ಸಚಿವ ವಿ.ಸೋಮಣ್ಣ ಮನವೊಲಿಕೆ ಕಾರ್ಯಕ್ಕೆ ರಾಜ್ಯ ಬಿಜೆಪಿ ನಾಯಕರು ತಡವಾಗಿ ಮುಂದಾಗಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌, ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೂಡ ಖುದ್ದಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಆದರೆ ಯಡಿಯೂರಪ್ಪ ಮಾತುಕತೆ ನಡೆಸದಿರುವುದು ಸೋಮಣ್ಣ ಅಸಮಾಧಾನ ಹೆಚ್ಚಾಗಲು ಕಾರಣ ಎನ್ನಲಾಗಿತ್ತು.

ಇದನ್ನೂ ಓದಿ :ನನಗೆ ಗೋವಿಂದರಾಜನಗರ ಇದೆ, ಮತ್ತೊಂದು ಕ್ಷೇತ್ರದ ಅಗತ್ಯ ಇಲ್ಲ: ವಿ.ಸೋಮಣ್ಣ

ABOUT THE AUTHOR

...view details