ಕರ್ನಾಟಕ

karnataka

ETV Bharat / state

ಅರುಣ್​ ಸಿಂಗ್ ನೇತೃತ್ವದಲ್ಲಿ ಬಿಜೆಪಿ ನಾಯಕರ ಸಭೆ ; ಸಚಿವ ಯೋಗೇಶ್ವರ್ ಗೈರು - ಬೆಂಗಳೂರು ಲೇಟೆಸ್ಟ್ ನ್ಯೂಸ್

ಹೈದರಾಬಾದ್​ಗೆ ತೆರಳಿದ್ದ ಸಚಿವ ಸಿ ಪಿ ಯೋಗೇಶ್ವರ್ ಅಲ್ಲಿಂದ ದೆಹಲಿಗೆ ತೆರಳಿದ್ದರು. ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಸಂಜೆ 5.15ಕ್ಕೆ ವಿಸ್ತಾರ್ ವಿಮಾನದಲ್ಲಿ ದೆಹಲಿಯಿಂದ ಬಂದರಾದರೂ ಬಿಜೆಪಿ ಕಚೇರಿಗೆ ಇನ್ನೂ ಆಗಮಿಸಿಲ್ಲ..

arun singh meeting with state BJP leaders
ರಾಜ್ಯ ಬಿಜೆಪಿ ನಾಯಕರೊಂದಿಗೆ ಸಭೆ ಆರಂಭ

By

Published : Jun 16, 2021, 6:39 PM IST

Updated : Jun 16, 2021, 6:53 PM IST

ಬೆಂಗಳೂರು: ಪಕ್ಷದಲ್ಲಿನ ಆಂತರಿಕ ಕಲಹ ನಿವಾರಿಸಲು ಆಗಮಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಸಚಿವರ ಜತೆ ಮಹತ್ವದ ಸಭೆ ನಡೆಸುತ್ತಿದ್ದಾರೆ. ಭಿನ್ನರ ಪಾಳಯದಲ್ಲಿ ಗುರುತಿಸಿಕೊಂಡಿರುವ ಸಚಿವ ಸಿ ಪಿ ಯೋಗೇಶ್ವರ್ ಹೊರತುಪಡಿಸಿ ಇತರೆ ಎಲ್ಲ ಸಚಿವರು ಸಭೆಯಲ್ಲಿ ಭಾಗಿಯಾಗಿದ್ದಾರೆ.

ಸಭೆಗೆ ಬಿಜೆಪಿ ನಾಯಕರು ಆಗಮಿಸುತ್ತಿರುವುದು..

ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಆಗಮಿಸಿದರು. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಸ್ವಾಗತಿಸಿದರು. ನಂತರ ಮೂರನೇ ಮಹಡಿಯಲ್ಲಿ ಸಚಿವರ ಸಭೆ ನಡೆಸುತ್ತಿದ್ದಾರೆ.

ರಾಜ್ಯ ಬಿಜೆಪಿಯಲ್ಲಿ ತಲೆದೂರಿರುವ ಗೊಂದಲ, ಸಮಸ್ಯೆ ಕುರಿತು ಸಮಾಲೋಚನೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡುತ್ತಿದ್ದಾರೆ. ‌ಶಾಸಕರ ಅಸಮಾಧಾನಕ್ಕೆ ಕಾರಣವೇನು, ಶಾಸಕರನ್ನು ಕಡೆಗಣಿಸಿದ್ದು ಯಾಕೆ? ಇದಕ್ಕೆ ಪರಿಹಾರವೇನು ಎನ್ನುವುದು ಸೇರಿದಂತೆ ಇಲಾಖೆಯಲ್ಲಿ ಸಚಿವರ ಸಾಧನೆಯೂ ಪ್ರಸ್ತಾಪವಾಗಲಿದೆ ಎಂದು ತಿಳಿದು ಬಂದಿದೆ.

ರಾಜ್ಯ ಬಿಜೆಪಿ ನಾಯಕರೊಂದಿಗೆ ಸಭೆ ಆರಂಭ

ಕೊರೊನಾ ನಿರ್ವಹಣೆ, ಆಡಳಿತ ಮತ್ತು ಅಭಿವೃದ್ಧಿ ವಿಚಾರದ ಕುರಿತು ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ಸಿಎಂ-ಸಚಿವರು, ಸಚಿವರು-ಶಾಸಕರು, ಸಿಎಂ-ಶಾಸಕರ ನಡುವಿನ ಸಮನ್ವಯತೆ ಕುರಿತು ಚರ್ಚೆ ನಡೆಯಲಿದೆ ಎಂದು ಮಾಹಿತಿ ಇದೆ.

ಸಭೆಯಲ್ಲಿ ಭಾಗಿಯಾದವರು :

  • ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
  • ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್
  • ನಾರಾಯಣ್ ಗೌಡ
  • ಮಾಧುಸ್ವಾಮಿ
  • ಸುರೇಶ್ ಕುಮಾರ್
  • ಶ್ರೀರಾಮಲು
  • ಈಶ್ವರಪ್ಪ
  • ಪ್ರಭು ಚೌಹಾಣ್
  • ಲಕ್ಷ್ಮಣ್ ಸವದಿ
  • ಶಶಿಕಲಾ ಜೊಲ್ಲೆ
  • ಉಮೇಶ್ ಕತ್ತಿ
  • ಅರವಿಂದ್ ಲಿಂಬಾವಳಿ
  • ಮುರುಗೇಶ್ ನಿರಾಣಿ
  • ವಿ ಸೋಮಣ್ಣ
  • ಅಶ್ವತ್ಥ್‌ ನಾರಾಯಣ
  • ಜಗದೀಶ್ ಶೆಟ್ಟರ್
  • ಆರ್ ಶಂಕರ್
  • ಬಿ ಸಿ ಪಾಟೀಲ್
  • ಗೋವಿಂದ್ ಕಾರಜೋಳ್
  • ಎಸ್ ಟಿ ಸೋಮಶೇಖರ್
  • ಆರ್ ಅಶೋಕ್
  • ಡಾ. ಸುಧಾಕರ್
  • ಬಸವರಾಜ್ ಬೊಮ್ಮಯಿ
  • ಶಿವರಾಮ್ ಹೆಬ್ಬಾರ್
  • ಆನಂದ್ ಸಿಂಗ್
  • ಸಿ ಸಿ ಪಾಟೀಲ್
  • ಕೋಟ ಶ್ರೀನಿವಾಸ್ ಪೂಜಾರಿ
  • ಎಸ್ ಅಂಗಾರ
  • ಬೈರತಿ ಬಸವರಾಜ್
  • ಎಂಟಿಬಿ ನಾಗರಾಜ್
  • ಗೋಪಾಲಯ್ಯ
  • ಶ್ರೀಮಂತ ಪಾಟೀಲ್

ಬಿಜೆಪಿ ಕಚೇರಿಗೆ ಆಗಮಿಸದ ಯೋಗೇಶ್ವರ್ :ಹೈದರಾಬಾದ್​ಗೆ ತೆರಳಿದ್ದ ಸಚಿವ ಸಿ ಪಿ ಯೋಗೇಶ್ವರ್ ಅಲ್ಲಿಂದ ದೆಹಲಿಗೆ ತೆರಳಿದ್ದರು. ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಸಂಜೆ 5.15ಕ್ಕೆ ವಿಸ್ತಾರ್ ವಿಮಾನದಲ್ಲಿ ದೆಹಲಿಯಿಂದ ಬಂದರಾದರೂ ಬಿಜೆಪಿ ಕಚೇರಿಗೆ ಇನ್ನೂ ಆಗಮಿಸಿಲ್ಲ.

ಇದನ್ನೂ ಓದಿ:ಕೆ ಕೆ ಗೆಸ್ಟ್​ಹೌಸ್​ಗೆ ಅರುಣ್​ ಸಿಂಗ್​ ಆಗಮನ..​ ರಾಜ್ಯ ಬಿಜೆಪಿ ನಾಯಕರೊಂದಿಗೆ ಸಭೆ ಆರಂಭ

Last Updated : Jun 16, 2021, 6:53 PM IST

ABOUT THE AUTHOR

...view details