ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಭಾಗಿಯಾಗಲು ಇಂದು ನಗರಕ್ಕೆ ಆಗಮಿಸಬೇಕಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬರುವುದು ವಿಳಂಬವಾದ ಹಿನ್ನೆಲೆ ಕುಮಾರ ಕೃಪಾ ಅತಿಥಿಗೃಹ ಬಿಕೋ ಎನ್ನುತ್ತಿತ್ತು.
ಇಂದು ಸಂಜೆ 3 ಗಂಟೆಗೆ ರಾಜಭವನದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳಿಗೆ ನೂತನ ಸಚಿವರ ನೇಮಕ ಆಗಲಿದೆ. ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಅರುಣ್ ಸಿಂಗ್ ಆಗಮಿಸುತ್ತಿದ್ದಾರೆ. ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಬೇಕಿದ್ದ ವಿಮಾನ ಒಂದು ಗಂಟೆ ತಡವಾಗಿ ತಲುಪಿರುವ ಹಿನ್ನೆಲೆ ಅರುಣ್ ಸಿಂಗ್ ಬರುವುದು ಲೇಟ್ ಆಯಿತು.