ಬೆಂಗಳೂರು:ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಮಾಜಿ ಮೇಯರ್ ಸಂಪತ್ರಾಜ್ ಆಪ್ತ ಅರುಣ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಗಲಭೆಗೆ ಕುಮ್ಮಕ್ಕು ಆರೋಪ: ಮಾಜಿ ಮೇಯರ್ ಆಪ್ತ ಅರುಣ್ ಅರೆಸ್ಟ್ - ಮಾಜಿ ಮೇಯರ್ ಸಂಪತ್ರಾಜ್ ಆಪ್ತ ಅರುಣ್
ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಪಟ್ಟಂತೆ ಮಾಜಿ ಮೇಯರ್ ಸಂಪತ್ರಾಜ್ ಆಪ್ತ ಅರುಣ್ ಎಂಬ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗಲಾಟೆಗೆ ಕುಮ್ಮಕ್ಕು ನೀಡಿರುವ ಕುರಿತಾದ ತಾಂತ್ರಿಕ ಸಾಕ್ಷ್ಯಗಳು ಲಭ್ಯವಾಗಿದ್ದರಿಂದ ಪೊಲೀಸರು ಈತನನ್ನು ಬಂಧಿಸಿದ್ದಾರೆ.
![ಬೆಂಗಳೂರು ಗಲಭೆಗೆ ಕುಮ್ಮಕ್ಕು ಆರೋಪ: ಮಾಜಿ ಮೇಯರ್ ಆಪ್ತ ಅರುಣ್ ಅರೆಸ್ಟ್ Ex mayor's aide Arun arrested in Bangaluru](https://etvbharatimages.akamaized.net/etvbharat/prod-images/768-512-8482493-921-8482493-1597851866394.jpg)
ಮಾಜಿ ಮೇಯರ್ ಆಪ್ತ ಅರುಣ್
ಎಸ್ಡಿಪಿಐ ಮುಖಂಡ ಮುಜಮಿಲ್ ಜೊತೆ ಸಂಪರ್ಕ ಹೊಂದಿದ್ದ ಆರೋಪದಡಿ ಅರುಣ್ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಗಳು ಸಿಕ್ಕಿದ್ದರಿಂದ ಇಂದು ಅರುಣ್ನನ್ನು ಬಂಧಿಸಲಾಗಿದೆ.
ನಾಳೆ ವಿಡಿಯೊ ಕಾನ್ಪರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಗಲಭೆ ವೇಳೆ ಮುಜಮಿಲ್ ಜೊತೆ ಅರುಣ್ ಫೋನ್ ಮೂಲಕ ಸಂಪರ್ಕದಲ್ಲಿದ್ದ ಎಂದು ತಿಳಿದು ಬಂದಿದೆ. ಅಲ್ಲದೇ ಗಲಭೆಯ ವಿಡಿಯೋ ತರಿಸಿಕೊಂಡು ವೀಕ್ಷಣೆ ಮಾಡಿ ಬೇರೆಯವರಿಗೆ ಕಳುಹಿಸಿದ್ದ.