ಕರ್ನಾಟಕ

karnataka

ETV Bharat / state

ಲಾಕ್​​ಡೌನ್​​ನಿಂದ ಸಂಕಷ್ಟದಲ್ಲಿ ಕಲಾವಿದರು: ಸಚಿವ ಸಿ.ಟಿ.ರವಿ ಭೇಟಿ ಮಾಡಿ ನೆರವಿಗೆ ಮನವಿ - ಸಿನಿಮಾ

ಸಂಪೂರ್ಣ ದೇಶ ಲಾಕ್​ಡೌನ್ ಆಗಿರುವ ಹಿನ್ನೆಲೆ ಸಿನಿಮಾ ರಂಗ, ನಾಟಕ ಹಾಗೂ ಕಲಾವಿದರೂ ಕೆಲಸವಿಲ್ಲದೆ ಮನೆಯಲ್ಲಿಯೇ ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

Artists meets Minister CT Ravi appeals for assistance
ಲಾಕ್​​ಡೌನ್​​ನಿಂದ ಸಂಕಷ್ಟದಲ್ಲಿ ಕಲಾವಿದರು: ಸಚಿವ ಸಿ.ಟಿ.ರವಿ ಭೇಟಿ ಮಾಡಿ ನೆರವಿಗೆ ಮನವಿಲಾಕ್​​ಡೌನ್​​ನಿಂದ ಸಂಕಷ್ಟದಲ್ಲಿ ಕಲಾವಿದರು: ಸಚಿವ ಸಿ.ಟಿ.ರವಿ ಭೇಟಿ ಮಾಡಿ ನೆರವಿಗೆ ಮನವಿ

By

Published : Apr 17, 2020, 4:53 PM IST

ಬೆಂಗಳೂರು:ಕೊರೊನಾ ಲಾಕ್​ಡೌನ್​ನಿಂದಾಗಿ ಕಲಾವಿದರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹಲವು ಕಡೆ ಕಾರ್ಯಕ್ರಮ ನಡೆಸಿಕೊಂಡು ಜೀವನೋಪಾಯಕ್ಕೆ ದಾರಿ ಮಾಡಿಕೊಂಡಿದ್ದ ಕಲಾವಿದರು ಲಾಕ್​ಡೌನ್​ನಿಂದಾಗಿ ಕೆಲಸವಿಲ್ಲದೆ ಮನೆಯಲ್ಲಿಯೇ ಇರುವ ಸ್ಥಿತಿ ನಿರ್ಮಾಣವಾಗಿದೆ.

ಈ ಹಿನ್ನೆಲೆ ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ನೇತೃತ್ವದಲ್ಲಿ ರಂಗಭೂಮಿ ಹಿತೈಷಿ ಬಳಗ ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರನ್ನು ಭೇಟಿ ಮಾಡಿದೆ.

ಇಲ್ಲಿನ ಕುಮಾರ ಕೃಪ ಅತಿಥಿ ಗೃಹದಲ್ಲಿ ಭೇಟಿ ಮಾಡಿ ಕೊರೊನಾ ಲಾಕ್​​​ಡೌನ್​​​ನಿಂದ ಸಂಕಷ್ಟದಲ್ಲಿರುವ ರಾಜ್ಯದ ಕಲಾವಿದರಿಗೆ ಆರ್ಥಿಕ ನೆರವು ಒದಗಿಸಲು ಮನವಿ ಸಲ್ಲಿಸಲಾಯಿತು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದ ಸಮಿತಿಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಕಷ್ಟದಲ್ಲಿರುವ ಸುಮಾರು 1,737 ಕಲಾವಿದರ ಪಟ್ಟಿಯನ್ನು ಸಿದ್ಧಪಡಿಸಿ ಮನವಿ ಸಲ್ಲಿಸಲಾಯಿತು.

ಹಿರಿಯ ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ.ಮುರಳಿಧರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎಸ್.ರಂಗಪ್ಪ, ಜಾನಪದ ಪರಿಷತ್ತಿನ ಅಧ್ಯಕ್ಷ ತಿಮ್ಮಯ್ಯ ಇದ್ದರು. ಸಚಿವರು ರಾಜ್ಯದ ಕಲಾವಿದರಿಗೆ ಆರ್ಥಿಕ ಸಹಾಯ ನೀಡುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದರು.

ABOUT THE AUTHOR

...view details