ಬೆಂಗಳೂರು:ದಿನೇ ದಿನೆ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದಂತೆ ಜನರಲ್ಲಿ ಆತಂಕ ಹೆಚ್ಚಿದೆ. ನಿತ್ಯ ಸಾವಿರ ಗಡಿದಾಟುತ್ತಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನ ಕಕ್ಕಾಬಿಕ್ಕಿ ಆಗಿದ್ದಾರೆ. ಇದರ ಪರಿಣಾಮ ಯಾರು ಏನೇ ಸಲಹೆ ನೀಡಿದರೂ ಸ್ವೀಕರಿಸುವ ಮನೋಭಾವ ಹೆಚ್ಚಿದೆ. ಕೊರೊನಾ ಬಗೆಗೆ ಆತಂಕ- ಭಯ ಬೇಡ, ಮುಂಜಾಗ್ರತೆ ವಹಿಸಿ ಎಂದು ಆರೋಗ್ಯ ಇಲಾಖೆ ಹೇಳುತ್ತಲೇ ಇದೆ.
ಆರ್ಸೆನಿಕ್ ಆಲ್ಬಂ-30 ಔಷಧವನ್ನ ಕೊರೊನಾ ಮೆಡಿಸಿನ್ ಎಂದು ಮುಗಿ ಬಿದ್ದ ಜನರು - ಬೆಂಗಳೂರು ಆರ್ಸೆನಿಕ್ ಆಲ್ಬಂ-30 ಔಷಧಿ ಮುಗಿ ಬಿದ್ದ ಜನ ಸುದ್ದಿ
ಇತ್ತ ಕೊರೊನಾ ಆತಂಕ ಬೆಂಗಳೂರಿನಲ್ಲಿ ಹೆಚ್ಚಾಗಿದ್ದು, ಎಲ್ಲ ಭಾಗಗಳು ಹೈರಿಸ್ಕ್ ಪ್ರದೇಶವಾಗಿ ಬದಲಾಗಿದೆ. ಹೀಗಾಗಿ, ಭಾರತ ಸರ್ಕಾರದ ಆಯುಷ್ ಮಂತ್ರಾಲಯ ಆರ್ಸೆನಿಕ್ ಆಲ್ಬಂ-30 ಔಷಧ ನೀಡುತ್ತಿದೆ. ಆದರೆ, ಜನರು ಇದನ್ನ ಕೊರೊನಾ ರೋಗದ ಔಷಧ ಎಂದು ತಿಳಿದು ಖರೀದಿಗೆ ಮುಂದಾಗಿದ್ದಾರೆ.
ಕೊರೊನಾ ಆತಂಕ
ಇತ್ತ ಕೊರೊನಾ ಆತಂಕ ಬೆಂಗಳೂರಿನಲ್ಲಿ ಹೆಚ್ಚಾಗಿದ್ದು, ಎಲ್ಲ ಭಾಗಗಳು ಹೈ ರಿಸ್ಕ್ ಪ್ರದೇಶಗಳಾಗಿ ಬದಲಾಗಿದೆ. ಹೀಗಾಗಿ, ಭಾರತ ಸರ್ಕಾರದ ಆಯುಷ್ ಮಂತ್ರಾಲಯ ಆರ್ಸೆನಿಕ್ ಆಲ್ಬಂ-30 ಔಷಧ ನೀಡುತ್ತಿದೆ. ಆದರೆ, ಜನರು ಇದನ್ನ ಕೊರೊನಾ ರೋಗದ ಔಷಧ ಎಂದು ತಿಳಿದು ಖರೀದಿಗೆ ಮುಂದಾಗಿದ್ದಾರೆ.
ಹೀಗಾಗಿ ಆಯುಷ್ ಇಲಾಖೆ ಈ ಸಂಬಂಧ ಸ್ಪಷ್ಟನೆ ನೀಡಿದ್ದು, ಸಾರ್ವಜನಿಕರ ಗಮನಕ್ಕೆ ತಂದಿದ್ದು ಆರ್ಸೆನಿಕ್ ಆಲ್ಬಂ-30 ಔಷಧ ಕೊರೊನಾ ರೋಗಕ್ಕೆ ನೀಡುವ ಔಷಧವಲ್ಲ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನೀಡುತ್ತಿರುವ ಔಷಧಿಯಾಗಿದೆ ಅಂತ ತಿಳಿಸಿದೆ.
Last Updated : Jul 17, 2020, 3:07 PM IST