ಬೆಂಗಳೂರು: ಲಾಕ್ಡೌನ್ ನಡುವೆಯೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಮನೆಗೆ ಇಂದು ಹೊಸ ಅತಿಥಿಗಳು ಬಂದಿದ್ದಾರೆ.
ಮುಖ್ಯಮಂತ್ರಿಗಳ ಮನೆಗೆ ಬಂದ ಹೊಸ ಅತಿಥಿಗಳು.. ಕುಟುಂಬದವರಿಗೆಲ್ಲ ಮುಗಿಲೆತ್ತರದ ಹರುಷ! - chief minister house
ಯಡಿಯೂರಪ್ಪನವರ ಮನೆಗೆ ಇಂದು ಹೊಸ ಅತಿಥಿಗಳ ಆಗಮ ಆಗಿದೆ. ಗಿರ್ ತಳಿಯ ಎರಡು ಹಸುಗಳು ಆಮಿಸಿದ್ದು ಪೂಜೆ ನೆರವೇರಿಸಿ ಅವುಗಳನ್ನು ಬರಮಾಡಿಕೊಳ್ಳಲಾಯಿತು.
ಮುಖ್ಯಮಂತ್ರಿಗಳ ಮನೆಗೆ ಬಂದ ಹೊಸ ಅತಿಥಿ
ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಗಿರ್ ತಳಿಯ ಎರಡು ಹಸುಗಳನ್ನು ನೀಡಿದ್ದಾರೆ. ಇಂದು ಸಂಜೆ ಮುಖ್ಯಮಂತ್ರಿ ಸೇರಿದಂತೆ ಅವರ ಕುಟುಂಬ ವರ್ಗ ಹೊಸ ಅತಿಥಿಗಳನ್ನು ಸ್ವಾಗತ ಮಾಡಿದರು.
ಒಂದು ಹಸುವಿಗೆ ಪುಟ್ಟ ಕರು ಇದ್ದು, ಪೂಜೆ ನೆರವೇರಿಸಿ ಗೋವುಗಳನ್ನು ಬರಮಾಡಿಕೊಳ್ಳಲಾಯಿತು. ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಹಸುಗಳಿಗಾಗಿ ಪ್ರತ್ಯೇಕ ಶೆಡ್ ನಿರ್ಮಾಣ ಮಾಡಲಾಗಿದೆ.