ಬೆಂಗಳೂರು: ನಾಯಕತ್ವ ಬದಲಾವಣೆ ಕುರಿತು ಪಕ್ಷದ ಹೈಕಮಾಂಡ್‌ನಿಂದ ಯಾವ ಕ್ಷಣದಲ್ಲಿ ಬೇಕಾದರೂ ಸಂದೇಶ ಬರುವ ನಿರೀಕ್ಷೆಯಲ್ಲಿ ಕಾಲ ಕಳೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದ್ಯ ಕುಟುಂಬ ಸದಸ್ಯರ ಜೊತೆ ಕಾಲ ಕಳೆಯುತ್ತಿದ್ದಾರೆ.
ಹೈಕಮಾಂಡ್ ಸಂದೇಶಕ್ಕೆ ಕ್ಷಣಗಣನೆ.. ಸಿಎಂ ನಿವಾಸಕ್ಕೆ ಕುಟುಂಬ ಸದಸ್ಯರ ಆಗಮನ - ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಕುಟುಂಬ ಸದಸ್ಯರ ಆಗಮನ
ಬಿಜೆಪಿ ಹೈಕಮಾಂಡ್‌ನಿಂದ ಸಂದೇಶದ ಹಾದಿ ಕಾಯುತ್ತಿರುವ ಸಿಎಂ ಬಿಎಸ್‌ವೈಗೆ, ಕುಟುಂಬ ಸದಸ್ಯರು ಅದರಲ್ಲಿಯೂ ಮೊಮ್ಮಕ್ಕಳು, ಸೊಸೆಯಂದಿರು ಜೊತೆಯಾಗಿದ್ದಾರೆ.

ಸಿಎಂ ನಿವಾಸಕ್ಕೆ ಕುಟುಂಬ ಸದಸ್ಯರ ಆಗಮನ
ಬೆಳಗಾವಿ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್ಸಾದ ಯಡಿಯೂರಪ್ಪ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ಅಧಿಕೃತ ನಿವಾಸ ಕಾವೇರಿಯಲ್ಲಿದ್ದಾರೆ. ಸಿಎಂ ಆಗಮಿಸುತ್ತಿದ್ದಂತೆ ಕಾವೇರಿಗೆ ಪುತ್ರ ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಕುಟುಂಬ ಸದಸ್ಯರು ಆಗಮಿಸಿದರು. ನಂತರ ಮತ್ತೋರ್ವ ಪುತ್ರ ವಿಜಯೇಂದ್ರ ಕುಟುಂಬ ಸದಸ್ಯರೂ ಕಾವೇರಿಗೆ ಆಗಮಿಸಿದ್ದಾರೆ.
ಇದನ್ನೂ ಓದಿ : ಇದುವರೆಗೂ ಹೈಕಮಾಂಡ್‌ನಿಂದ ಯಾವುದೇ ಸಂದೇಶ ಬಂದಿಲ್ಲ: ಸಿಎಂ ಬಿಎಸ್ವೈ