ಕರ್ನಾಟಕ

karnataka

ETV Bharat / state

ಬಾರ್‌ಗಳಲ್ಲಿ ಅಶ್ಲೀಲ ನೃತ್ಯ; ಪೊಲೀಸರಿಂದ ಯುವತಿಯರ ರಕ್ಷಣೆ, ಮಾಲೀಕರು ಪರಾರಿ - undefined

ಬೆಂಗಳೂರಿನ ಎರಡು ಬಾರ್​ಗಳ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಅನ್ಯ ರಾಜ್ಯದ ಯುವತಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಾಪೆತ್ತಯಾದ ಮಾಲಿಕರನ್ನು ಬಂಧಿಸಲು ಬಲೆ ಬೀಸಿದ್ದಾರೆ.

ಲವರ್ಸ್​ ನೈಟ್​ ಡ್ಯಾನ್ಸ್​ ಬಾರ್​​ನ ವ್ಯವಸ್ಥಾಪಕ ಹಾಗೂ ಅಕೌಂಟೆಂಟ್​

By

Published : Jul 26, 2019, 6:32 PM IST

ಬೆಂಗಳೂರು:ಇಲ್ಲಿನ ಟೌನ್ ಹಾಲ್​ ಬಳಿಯ ಲವರ್ಸ್​ ನೈಟ್​ ಡ್ಯಾನ್ಸ್​ ಬಾರ್​​ನಲ್ಲಿ ಯುವತಿಯರಿಂದ ಅಶ್ಲೀಲ ನೃತ್ಯ ಮಾಡಿಸಲಾಗುತ್ತಿದೆ ಎಂಬ ದೂರಿನನ್ವಯ ದಾಳಿ ನಡೆಸಿದ ಸಿಸಿಬಿ ಪೊಲೀಸರು ವ್ಯವಸ್ಥಾಪಕ ಹಾಗೂ ಅಕೌಂಟೆಂಟ್​ ಸೇರಿ 32 ಜನರನ್ನು ಬಂಧಿಸಿದ್ದಾರೆ.

ಲವರ್ಸ್​ ನೈಟ್​ ಡ್ಯಾನ್ಸ್​ ಬಾರ್​​ನ ವ್ಯವಸ್ಥಾಪಕ ಹಾಗೂ ಅಕೌಂಟೆಂಟ್​

ಬಾರ್‌ನ ವ್ಯವಸ್ಥಾಪಕ ಸದಾನಂದ ಪೂಜಾರಿ, ಅಕೌಂಟೆಂಟ್​ ಬಾಲಕೃಷ್ಣ ಶೆಟ್ಟಿ ಬಂಧಿತ ಆರೋಪಿಗಳು. ನೃತ್ಯ ಮಾಡುತ್ತಿದ್ದ 33 ಯುವತಿಯರನ್ನು ರಕ್ಷಿಸಲಾಗಿದೆ. ಇವರಿಗೆ ಕೆಲಸದ ಆಮಿಷವೊಡ್ಡಿ ಅನ್ಯ ರಾಜ್ಯದಿಂದ ಕರೆ ತರಲಾಗಿದ್ದು, ಬಾರ್​ ಮಾಲಿಕ ಯತೀಶ್​ ಚಂದ್ರಶೆಟ್ಟಿ, ನರೇಂದ್ರ ಬಾಬು ಹಾಗೂ ಕಟ್ಟಡ ಮಾಲಿಕ ಸುಧೀಂದ್ರ ಬಾಬು ನಾಪತ್ತೆಯಾಗಿದ್ದಾರೆ.

ಅದೇ ದಿನ ಅಶೋಕ ನಗರದ ರೆಸಿಡೆನ್ಸಿ ರಸ್ತೆಯಲ್ಲಿನ ಪೇಜ್​ 3 ಲೈವ್ ಬ್ಯಾಂಡ್​ ಮೇಲೆ ದಾಳಿ ಮಾಡಿ ಸುಮಾರು 20 ಜನರನ್ನು ಬಂಧಿಸಿ ₹88 ಸಾವಿರ ನಗದು, 71 ಮಹಿಳೆಯರನ್ನು ರಕ್ಷಿಸುವಲ್ಲಿ ಸಿಸಿಬಿ ಯಶಸ್ವಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

For All Latest Updates

TAGGED:

ABOUT THE AUTHOR

...view details