ಬೆಂಗಳೂರು: ದೇಶದಲ್ಲಿ ಬಾಂಗ್ಲಾ ನುಸುಳುಕೋರರ ಸಂಖ್ಯೆ ಹೆಚ್ಚಾಗುತ್ತಿದೆ. ಅಕ್ರಮವಾಗಿ ನೆಲೆಸಿರುವವರನ್ನು ಪತ್ತೆ ಹಚ್ಚಲು ಸರ್ಕಾರ ವಿಶೇಷ ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ಕಳೆದ 15 ವರ್ಷದ ಹಿಂದೆ ಭಾರತಕ್ಕೆ ನುಸುಳಿ ಬಂದಿದ್ದ ಬಾಂಗ್ಲಾ ದೇಶದ ಮುಸ್ಲಿಂ ಯುವತಿಯೊಬ್ಬಳು ಹಿಂದೂ ಹೆಸರಿಟ್ಟುಕೊಂಡು ಇಲ್ಲಿನ ಪೌರತ್ವ ಪಡೆದುಕೊಂಡಿದ್ದಾಳೆ. ಸದ್ಯಕ್ಕೆ ಅಕ್ರಮವಾಗಿ ನೆಲೆಸಿರುವ ಮಹಿಳೆಯನ್ನ ಬ್ಯಾಡರಹಳ್ಳಿ ಪೊಲೀಸರು ಪತ್ತೆ ಹಚ್ಚಿ, ಬಂಧಿಸಿದ್ದಾರೆ.
ಬಾಂಗ್ಲಾದಿಂದ 2006-07ರಲ್ಲಿ ಭಾರತಕ್ಕೆ ಅಕ್ರಮವಾಗಿ ಬಂದಿದ್ದ ರೋನಿ ಬೇಗಂ ಮುಂಬೈನಲ್ಲಿ ವಾಸವಾಗಿದ್ದಳು. ಇಲ್ಲಿನ ಡ್ಯಾನ್ಸ್ ಬಾರ್ನಲ್ಲಿ ಕೆಲಸ ಮಾಡಿಕೊಂಡಿದ್ದ ರೋನಿ, ತನ್ನ ಹೆಸರನ್ನು ಪಾಯಲ್ ಘೋಷ್ ಎಂದು ಬದಲಿಸಿಕೊಂಡಿದ್ದಳು. ಮುಂಬೈನಲ್ಲಿ ಮಂಗಳೂರು ಮೂಲದ ನಿತಿನ್ ಎಂಬಾತ ಪರಿಚಯವಾಗಿದ್ದ, ಪರಿಚಯ ಕ್ರಮೇಣ ಪ್ರೀತಿಗೂ ತಿರುಗಿತ್ತು. ನಂತರ 2015ರಲ್ಲಿ ಬೆಂಗಳೂರಿಗೆ ಬಂದಿದ್ದ ರೋನಿ ಮತ್ತು ನಿತಿನ್ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದರು.
ಇಲ್ಲೇ ಟೈಲರಿಂಗ್ ಕೆಲಸ ಮಾಡಿಕೊಂಡಿ ರೋನಿ, ನಿತಿನ್ನನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾಗಿ ಅಕ್ರಮವಾಗಿ ಹೆಸರು ಬದಲಿಸಿಕೊಂಡಿದ್ದಳು ಎನ್ನಲಾಗ್ತಿದೆ. ನಕಲಿ ದಾಖಲೆ ಕೊಟ್ಟು ಭಾರತ ಪ್ರಜೆಯಾಗಿ ದಾಖಲೆ ಮಾರ್ಪಾಡು ಮಾಡಿಕೊಂಡಿದ್ದ ರೋನಿ, ಬಾಂಗ್ಲಾಗೆ ಪ್ರಯಾಣ ಮಾಡುವಾಗ ಏರ್ ಪೋರ್ಟ್ ಅಧಿಕಾರಿಗಳ ಕೈಗೆ ಲಾಕ್ ಆಗಿದ್ದಳು.