ಕರ್ನಾಟಕ

karnataka

ETV Bharat / state

ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿ ಕೋಟಿ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದವಳು ಕೊನೆಗೂ ಅಂದರ್​ - bangalore crime news

ಸಿವಿಲ್‌‌ ಕಂಟ್ರಾಕ್ಟರ್ ಆಗಿರುವ ಲೋಹಿತ್ ಮೂರು ತಿಂಗಳ ಹಿಂದೆ ಮನೆ ಬಳಿ ಇರುವಾಗ ಇಬ್ಬರು ಯುವಕರು ಬಂದು ಹರ್ಬಲ್‌ ಲೈಫ್ ಪ್ರಾಡೆಕ್ಟ್ ಉಪಯೋಗಿಸಿದರೆ ತೆಳ್ಳಗಾಗುತ್ತೀರಾ ಎಂದು ಹೇಳಿ ಆರೋಪಿತೆ ಪೋನ್ ನಂಬರ್ ಕೊಟ್ಟಿದ್ದರು. ಬಳಿಕ ಪೋನ್ ಮಾಡಿ ಹರ್ಬಲ್ ಲೈಫ್ ಪ್ರಾಡೆಕ್ಟ್ ಖರೀದಿಸು‌ವ ಮುಖಾಂತರ ಆರೋಪಿತೆಯ ಪರಿಚಯ ಆಗಿ ಆ ಪರಿಚಯದಿಂದ ಸುಲಭವಾಗಿ ಹನಿಟ್ರ್ಯಾಪ್​​​​​ ಗೆ ಬೀಳುವಂತೆ ಮಾಡಿದ್ದಳು.

ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿ ಕೋಟಿ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದವಳು ಅಂದರ್​
ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿ ಕೋಟಿ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದವಳು ಅಂದರ್​

By

Published : Oct 14, 2021, 7:50 PM IST

ಬೆಂಗಳೂರು: ಹರ್ಬಲ್‌ ಲೈಫ್ ಪ್ರಾಡೆಕ್ಟ್ ಮಾರಾಟ ಸೋಗಿನಲ್ಲಿ ಸಿವಿಲ್‌‌ ಕಂಟ್ರಾಕ್ಟರ್ ಒಬ್ಬರನ್ನು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿ 1 ಕೋಟಿ ರೂಪಾಯಿ ಹಣಕ್ಕೆ‌ ಡಿಮ್ಯಾಂಡ್ ಮಾಡಿದ್ದ ಯುವತಿಯನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.

ನಾಗರಭಾವಿ‌ ನಿವಾಸಿ ಲೋಹಿತ್ ಎಂಬುವರು ನೀಡಿದ‌ ದೂರಿನ ಮೇರೆಗೆ ಕಾವ್ಯಾ ಎಂಬಾಕೆಯನ್ನು (ಹೆಸರು ಬದಲಿಸಲಾಗಿದೆ) ಬಂಧಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.

ಸಿವಿಲ್‌‌ ಕಂಟ್ರಾಕ್ಟರ್ ಆಗಿರುವ ಲೋಹಿತ್ ಮೂರು ತಿಂಗಳ ಹಿಂದೆ ಮನೆ ಬಳಿ ಇರುವಾಗ ಇಬ್ಬರು ಯುವಕರು ಬಂದು ಹರ್ಬಲ್‌ ಲೈಫ್ ಪ್ರಾಡೆಕ್ಟ್ ಉಪಯೋಗಿಸಿದರೆ ತೆಳ್ಳಗಾಗುತ್ತೀರಾ ಎಂದು ಹೇಳಿ ಆರೋಪಿತೆ ಪೋನ್ ನಂಬರ್ ಕೊಟ್ಟಿದ್ದರು. ಬಳಿಕ ಪೋನ್ ಮಾಡಿ ಹರ್ಬಲ್ ಲೈಫ್ ಪ್ರಾಡೆಕ್ಟ್ ಖರೀದಿಸು‌ವ ಮುಖಾಂತರ ಆರೋಪಿತೆಯ ಪರಿಚಯವಾಗಿತ್ತು.

ಕಾಲಕ್ರಮೇಣ ಪರಿಚಯ ಸಲುಗೆಗೆ ತಿರುಗಿತ್ತು. ಲೋಹಿತ್ ಹಾಗೂ ಆರೋಪಿತೆ ಸ್ನೇಹಿತರೆಲ್ಲರೂ‌ ಕನಕಪುರ ರೆಸಾರ್ಟ್ ವೊಂದಕ್ಕೆ ಹೋಗಿದ್ದರು. ಈ ವೇಳೆ, ಇಬ್ಬರು ಸಹ ಜೊತೆಯಲ್ಲಿ ಓಡಾಡಿಕೊಂಡಿದ್ದರು. ಕೆಲ ದಿನಗಳ ಬಳಿಕ ಲೋಹಿತ್​​ಗೆ ಕರೆ ಮಾಡಿ ಯುವತಿ ನಾಗರಭಾವಿ ಬಳಿ ಕರೆಯಿಸಿಕೊಂಡಿದ್ದಾಳೆ. ರೆಸಾರ್ಟ್ ನಲ್ಲಿ ತೆಗೆದುಕೊಂಡಿದ ಪೋಟೊಗಳನ್ನು ತೋರಿಸಿ 1 ಕೋಟಿ ರೂಪಾಯಿ ಹಣ ನೀಡುವಂತೆ ಒತ್ತಾಯಿಸಿದ್ದಾಳೆ.‌

ಹಣ ಕೊಡದಿದ್ದರೆ ಮದುವೆಯಾಗಿ ವಂಚಿಸಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡುವುದಾಗಿ ಧಮ್ಕಿ ಹಾಕಿದ್ದಳು. ಈ ಸಂಬಂಧ ಲೋಹಿತ್ ನೀಡಿದ ದೂರಿನ ಮೇರೆಗೆ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿತೆಯನ್ನು ಬಂಧಿಸಿದ್ದಾರೆ.

ABOUT THE AUTHOR

...view details