ಕರ್ನಾಟಕ

karnataka

ETV Bharat / state

ದರೋಡೆಗೆ ಸಂಚು ರೂಪಿಸಿದ್ದ ಇಬ್ಬರ ಬಂಧನ: 1 ಕಂಟ್ರಿ ಪಿಸ್ತೂಲ್​​​, 7 ಜೀವಂತ ಗುಂಡು ವಶ - ದರೋಡೆಗೆ ಸಂಚು ರೂಪಿಸಿದ್ದ ಇಬ್ಬರ ಬಂಧನ

ದರೋಡೆಗೆ ಸಂಚು ರೂಪಿಸಿದ್ದ ಇಬ್ಬರನ್ನು ಬಂದಿಸಲಾಗಿದ್ದು, ಒಬ್ಬ ಆರೋಪಿ ದಾಳಿ ವೇಳೆ ತಪ್ಪಿಕೊಂಡಿದ್ದಾನೆ. ಬಂಧಿತರಿಂದ ಪಿಸ್ತೂಲ್​, 54 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.

Arrest of two men for conspiracy to commit robbery
ದರೋಡೆಗೆ ಸಂಚು ರೂಪಿಸಿದ್ದ ಇಬ್ಬರ ಬಂಧನ

By

Published : Dec 21, 2019, 3:12 PM IST

ಬೆಂಗಳೂರು: ದರೋಡೆಗೆ ಸಂಚು ರೂಪಿಸಿದ್ದ ಇಬ್ಬರನ್ನು ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಸಮ್ಮು ಅಲಿಯಾಸ್ ಬಷೀರ್, ಸಜ್ಜದ್ ಆಲಿಬೇಗ್ ಬಂಧಿತರು. ದಾಳಿ ವೇಳೆ ಡಿಸೇಲ್ ಆಸೀಫ್ ಪರಾರಿಯಾಗಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

ದರೋಡೆಗೆ ಸಂಚು ರೂಪಿಸಿದ್ದ ಇಬ್ಬರ ಬಂಧನ

ಗುರುವಾರ ರಾತ್ರಿ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ದರೋಡೆಗೆ ಹೊಂಚು ಹಾಕುತ್ತಿದ್ದರು ಎಂಬ ಖಚಿತ ಮಾಹಿತಿ ಸಿಕ್ಕಿದ್ದು, ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆಸೀಫ್ ಪರಾರಿಯಾಗಿದ್ದಾನೆ. ಇಬ್ಬರನ್ನು ಬಂಧಿಸಿದ್ದು, ಒಂದು ಕಂಟ್ರಿ ಮೇಡ್ ಪಿಸ್ತೂಲ್, 7 ಜೀವಂತ ಗುಂಡುಗಳು ಹಾಗೂ 51 ಲಕ್ಷ ಮೌಲ್ಯದ ಚಿನ್ನಾಭರಣದ ಜೊತೆಗೆ ಒಂದು ಕಾರ್ ಜಪ್ತಿ ಮಾಡಿದ್ದಾರೆ.

ಈ ಕಳ್ಳರು ಶ್ರೀಮಂತರನ್ನು ಟಾರ್ಗೆಟ್​ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇವರ ಬಳಿ ಸಿಕ್ಕಿರುವ ಕಂಟ್ರಿ ಪಿಸ್ತೂಲ್​ ಬಿಹಾರ ಹಾಗೂ ನೇಪಾಳದ ಗಡಿ ಭಾಗದಲ್ಲಿ ಖರೀದಿಸಿದ ಪಿಸ್ತೂಲ್​ ಆಗಿದೆ. ಕಳ್ಳತನದ ವಸ್ತುಗಳನ್ನು ಖರೀದಿಸುತ್ತಿದ್ದ ಸಜ್ಜದ್ ಆಲಿಬೇಗ್​ನನ್ನು ಸಹ ಬಂಧಿಸಲಾಗಿದೆ.ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಪೊಲೀಸರು ಹೆಚ್ಚಿನ ತನಿಖೆ‌ ಮುಂದುವರೆಸಿದ್ದಾರೆ.

ABOUT THE AUTHOR

...view details