ಕರ್ನಾಟಕ

karnataka

ETV Bharat / state

ಗಾಂಜಾ ನಶೆಯಲ್ಲಿ ಪುಂಡಾಟ‌ ನಡೆಸಿದ್ದ ಇಬ್ಬರು ಆರೋಪಿಗಳ ಬಂಧನ - etv bharat

ಗಾಂಜಾ ಅಮಲಿನಲ್ಲಿ ಬೈಕ್​ನಲ್ಲಿ ಮಚ್ಚು- ಲಾಂಗ್ ಬೀಸಿಕೊಂಡು ವಿಜಯನಗರದಿಂದ ಬ್ಯಾಡರಹಳ್ಳಿಯವರೆಗೂ ಪಾನಿಪುರಿ ಅಂಗಡಿ ಸೇರಿದಂತೆ ಸಿಕ್ಕ‌ ಸಿಕ್ಕ ಅಂಗಡಿಗಳ ಮೇಲೆ ಹಲ್ಲೆ ಮಾಡಿದ್ದ ಪುಂಡರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಇಬ್ಬರು ಆರೋಪಿಗಳ ಬಂಧನ

By

Published : Jul 6, 2019, 3:25 PM IST

ಬೆಂಗಳೂರು:ಗಾಂಜಾ ಅಮಲಿನಲ್ಲಿ ಅಂಗಡಿಗಳ ಮೇಲೆ ಮನಬಂದಂತೆ ಮಾರಕಾಸ್ತ್ರಗಳಿಂದ ಪುಂಡಾಟ‌ ನಡೆಸಿದ್ದ ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ನಶೆಯಲ್ಲಿ ಪುಂಡಾಟ‌ ನಡೆಸಿದ್ದ ಇಬ್ಬರು ಆರೋಪಿಗಳ ಬಂಧನ

ಸುಹಾಸ್​ ಹಾಗೂ ಮಾರೇಗೌಡ ಬಂಧಿತ‌ ಆರೋಪಿಗಳು. ಕಳೆದ ಜೂನ್​ 30ರಂದು ಗಾಂಜಾ ಅಮಲಿನಲ್ಲಿ ಬೈಕ್​ನಲ್ಲಿ ಮಚ್ಚು- ಲಾಂಗ್ ಬೀಸಿಕೊಂಡು ವಿಜಯನಗರದಿಂದ ಬ್ಯಾಡರಹಳ್ಳಿಯವರೆಗೂ ಪಾನಿಪುರಿ ಅಂಗಡಿ ಸೇರಿದಂತೆ ಸಿಕ್ಕ‌ಸಿಕ್ಕ ಅಂಗಡಿಗಳ ಮೇಲೆ ಹಲ್ಲೆ ಮಾಡಿದ್ದರು. ಈ ಸಂಬಂಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಾಮಾಕ್ಷಿಪಾಳ್ಯ‌ ಠಾಣಾ ವ್ಯಾಪ್ತಿಯಲ್ಲೂ ಈ ಹಿಂದೆ ಆರೋಪಿಗಳು ಇದೇ ರೀತಿ‌ ಕೃತ್ಯ ನಡೆಸಿದ್ದರು.

ಈ ಸಂಬಂಧ ಕಾಮಾಕ್ಷಿಪಾಳ್ಯ ಇನ್ ಸ್ಪೆಕ್ಟರ್ ಗೌತಮ್ ನೇತೃತ್ವದ ತಂಡದಿಂದ ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯದಲ್ಲಿ ಮತ್ತಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಇವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ‌.

ABOUT THE AUTHOR

...view details