ಬೆಂಗಳೂರು: ಯಲಹಂಕ ಓಲ್ಡ್ ಟೌನ್ ಪೊಲೀಸರ ಕಾರ್ಯಾಚರಣೆಯಿಂದ ನಕಲಿ ನೋಟುಗಳ ಚಲಾವಣೆ ಮಾಡಲು ಮುಂದಾಗಿದ್ದ ಮೂವರನ್ನು ಬಂಧಿಸಲಾಗಿದೆ.
ನಕಲಿ ನೋಟು ಚಲಾವಣೆ: ಮೂವರ ಬಂಧನ - undefined
ಬಿಎಂಟಿಸಿಯಲ್ಲಿ ಕೆಲಸ ಮಾಡ್ತಿದ್ದ ಮೂವರು ಆರೋಪಿಗಳಲ್ಲಿ ಓರ್ವ ಡ್ರೈವರ್, ಇನ್ನೋರ್ವ ಕಂಡಕ್ಟರ್ ಮತ್ತೋರ್ವ ಫೊಟೋಗ್ರಾಫರ್ ಆಗಿದ್ದಾರೆ.
ನಕಲಿ ನೋಟು ಚಲಾವಣೆಗೆ ಮುಂದಾಗಿದ್ದ ಮೂವರ ಬಂಧನ
ಸೋಮನಗೌಡ (38), ಕಿರಣ್ ಕುಮಾರ್ (24), ನಂಜೇಗೌಡ (32) ಬಂಧಿತ ಆರೋಪಿಗಳು.
ಆರೋಪಿಗಳು ಯಲಹಂಕದ ಕೋಗಿಲು ಕ್ರಾಸ್ ಬಳಿ ಖೋಟಾನೋಟು ಚಲಾವಣೆಗೆ ಹೊಂಚು ಹಾಕುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಬಂಧಿತರಿಂದ 81 ಲಕ್ಷ ರೂಪಾಯಿ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ.