ಕರ್ನಾಟಕ

karnataka

ETV Bharat / state

ಸಿನಿಮೀಯ ರೀತಿಯಲ್ಲಿ ನಡೆದಿದ್ದ ಕಳ್ಳತನ: ನೇಪಾಳದ ಚಿನ್ನ ಚೋರರ ಬಂಧನ - Gold theft at Muthoot Finance

ಕಳೆದ ಡಿಸೆಂಬರ್ 22 ರಂದು ಮುತ್ತೂಟ್ ಫೈನಾನ್ಸ್​ನಲ್ಲಿ 77 ಕೆಜಿ‌ ಚಿನ್ನ ಕಳ್ಳತನವಾಗಿತ್ತು. ಈ ಸಂಬಂಧ ಜಾಲ ಬೀಸಿದ ಪೊಲೀಸರು ನಾಲ್ಕು ಆರೋಪಿಗಳನ್ನು ಬಂಧಿಸಿದ್ದು, ಉಳಿದವರ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಿದ್ದಾರೆ.

ನೇಪಾಳದ ಚಿನ್ನ ಚೋರರ ಬಂಧನ , Arrest of thieves who theft gold in Muthoot Finance
ನೇಪಾಳದ ಚಿನ್ನ ಚೋರರ ಬಂಧನ

By

Published : Jan 1, 2020, 4:23 PM IST

Updated : Jan 1, 2020, 5:05 PM IST

ಬೆಂಗಳೂರು: ಮುತ್ತೂಟ್ ಫೈನಾನ್ಸ್​ನಲ್ಲಿ ಸಿನಿಮೀಯ ರೀತಿ ನಡೆದ ಕಳ್ಳತನ ಪ್ರಕರಣದ ಜಾಲವನ್ನು ಬೇಧಿಸುವಲ್ಲಿ ಪೂರ್ವ ವಿಭಾಗ ಪೊಲೀಸರು ಯಶಸ್ವಿಯಾಗಿದ್ದಾರೆ.

ನೇಪಾಳ ಮತ್ತು ಬಿಹಾರ ಸೆಕ್ಯುರಿಟಿ ಗ್ಯಾಂಗ್​ನಿಂದ ಕಳ್ಳತನ ನಡೆದಿರುವ ಮಾಹಿತಿ ಮೇರೆಗೆ ನೇಪಾಳಕ್ಕೆ ತೆರಳಿದ್ದ ವಿಶೇಷ ತಂಡ, ಸದ್ಯ ನಾಲ್ವರು ಚಿನ್ನದ ಚೋರರನ್ನ ಹಿಡಿದು ಅವರಿಂದ ಸುಮಾರು 8.6 ಕೆಜಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ನೇಪಾಳದ ಚಿನ್ನ ಚೋರರ ಬಂಧನ

ಹೇಗಿತ್ತು ಇವರ ಪ್ಲಾನ್​:
ಬಿಹಾರದ ಥೆಪ್ಟ್ ಗ್ಯಾಂಗ್ ಲೀಡರ್ ಒಬ್ಬ ಪುಲಕೇಶಿನಗರ ಠಾಣಾ ವ್ಯಾಪ್ತಿಯ ಮುತ್ತೂಟ್ ಜ್ಯುವೆಲರ್ಸ್​ಗೆ ಕನ್ನ ಹಾಕಬೇಕು ಎಂದು ಪ್ಲಾನ್​ ಮಾಡಿದ್ದಾನೆ. ಇದಕ್ಕೆ ನೇಪಾಳದ ಸೆಕ್ಯೂರಿಟಿ ಗಾರ್ಡ್​ಗಳ ಸಹಾಯ ಪಡೆದು, ಒಟ್ಟು ಹನ್ನೆರಡು ಮಂದಿ ಸೇರಿಕೊಂಡು ಕಳ್ಳತನ ಮಾಡಿದ್ದಾರೆ.

ಕಳ್ಳತನ ಮಾಡಿದ ನಂತರ ಎರಡು ತಂಡಗಳಾಗಿ ವಿಭಾಗವಾದ ಇವರು, ಚಿನ್ನವನ್ನ ಹಂಚಿಕೊಂಡು ಒಂದು ತಂಡ ನೇಪಾಳ ಮತ್ತೊಂದು ತಂಡ ದೆಹಲಿಗೆ ತೆರಳಿದೆ. ಸದ್ಯ ನೇಪಾಳದಲ್ಲಿರುವ ನಾಲ್ವರನ್ನ ವಶಕ್ಕೆ ಪಡೆದು, ಗ್ಯಾಂಗ್ ಲೀಡರ್ ಹಾಗೂ ಉಳಿದ ಆರೋಪಿಗಳಿಗೆ ಶೋಧ ಕಾರ್ಯ ಮುಂದುವರೆದಿದೆ.

ಕಳೆದ ಡಿಸೆಂಬರ್ 22 ರಂದು ಮುತ್ತೂಟ್ ಫೈನಾನ್ಸ್​ನಲ್ಲಿ 77 ಕೆಜಿ‌ ಚಿನ್ನ ಕಳ್ಳತನವಾಗಿತ್ತು. ಹೀಗಾಗಿ ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್, ಡಿಸಿಪಿ ಹಾಗೂ ಸಿಸಿಬಿ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಆರೋಪಿಗಳ ಪತ್ತೆಗೆ ತಂಡ ರಚನೆ ಮಾಡಿದ್ದರು.

Last Updated : Jan 1, 2020, 5:05 PM IST

ABOUT THE AUTHOR

...view details