ಬೆಂಗಳೂರು:ಕೊರೊನಾ ಹಿನ್ನೆಲೆ ಲಾಕೌಡೌನ್ ಇದ್ದು, ಕೆಲವರು ಕೆಲಸ ಕಳ್ಕೊಂಡು ಕಳೆದೆರಡು ದಿನಗಳಿಂದ ಲಾಕೌಡೌನ್ ಸಡಿಲಿಕೆ ಹಿನ್ನೆಲೆ ಓಡಾಟ ಶುರು ಮಾಡಿದ್ದಾರೆ. ಇದನ್ನೇ ಸದುಪಯೋಗ ಮಾಡಿಕೊಂಡ ಖದೀಮರು ದರೋಡೆಗೆ ಸಂಚು ರೂಪಿಸಿದ್ದು, ಸದ್ಯ ರೌಡಿಗಳ ಹೆಡೆಮುರಿ ಕಟ್ಟುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.
ದರೋಡೆಗೆ ಸಂಚು ರೂಪಿಸುತ್ತಿದ್ದ ಖದೀಮರ ಬಂಧನ - ಕೊರೊನಾ ಲಾಕೌಡೌನ್
ನಗರದ ಪೀಣ್ಯ ಪೊಲೀಸ್ ಠಾಣಾ ಸರಹದ್ದಿನಲ್ಲಿ ಇಂಡಸ್ಟ್ರಿಯಲ್ ಏರಿಯಾದ ಕಿರ್ಲೋಸ್ಕರ್ ರಸ್ತೆಯಲ್ಲಿ ಸಾರ್ವಜನಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಅವರಿಂದ ನಗದು, ಚಿನ್ನಾಭರಣ ದರೋಡೆಗೆ ಸಂಚು ರೂಪಿಸುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ.

ರಘು, ಗಣೇಶ್, ರಂಜನ್, ಸುನೀಲ್, ರಾಜಶೇಖರ್, ಬಂಧಿತ ಆರೋಪಿಗಳು. ಇವರು ನಗರದ ಪೀಣ್ಯ ಪೊಲೀಸ್ ಠಾಣಾ ಸರಹದ್ದಿನಲ್ಲಿ ಇಂಡಸ್ಟ್ರಿಯಲ್ ಏರಿಯಾದ ಕಿರ್ಲೋಸ್ಕರ್ ರಸ್ತೆಯಲ್ಲಿ ಸಾರ್ವಜನಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ನಗದು, ಚಿನ್ನಾಭರಣ ದರೋಡೆಗೆ ಸಂಚು ರೂಪಿಸಿದ್ದರು ಎಂಬ ಖಚಿತ ಮಾಹಿತಿ ಸಿಸಿಬಿ ಅಧಿಕಾರಿಗಳಿಗೆ ಬಂದಿತ್ತು. ಹೀಗಾಗಿ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನ ಬಂಧಿಸಿದ್ದು, ಮಚ್ಚು, ಒಂದು ಲಾಂಗ್, ಎರಡು ಖಾರದ ಪುಡಿ ಪೊಟ್ಟಣಗಳನ್ನ ವಶಪಡಿಸಿಕೊಂಡಿದ್ದಾರೆ.
ಇನ್ನು ಬಂಧಿತ ಆರೋಪಿಗಳ ಮೇಲೆ ಈಗಾಗ್ಲೇ ರೌಡಿ ಪಟ್ಟಿ ತೆರೆದಿದ್ದು, ಪ್ರಮುಖ ಆರೋಪಿ ರಘು ಮೇಲೆ ಬಾಗಲಗುಂಟೆ, ಪೀಣ್ಯ ಮತ್ತು ಮಹಾಲಕ್ಷ್ಮಿ ಲೇಔಟ್ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ ಸೇರಿದಂತೆ ನಾಲ್ಕು ಪ್ರಕರಣ ದಾಖಲಾಗಿದೆ. ಹಾಗೆಯೇ ಗಣೇಶ್, ರಂಜನ್, ಸುನೀಲ್, ರಾಜಶೇಖರ್ ಮೇಲೆ ಕೊಲೆ, ಕೊಲೆ ಯತ್ನ ಪ್ರಕರಣಗಳಿದ್ದು, ಸದ್ಯ ತನಿಖೆ ಮುಂದುವರೆದಿದೆ.