ಕರ್ನಾಟಕ

karnataka

ETV Bharat / state

ಬೆತ್ತಲೆ ಫೋಟೋಗೆ ಬೇಡಿಕೆ ಇಡುತ್ತಿದ್ದ ಖತರ್ನಾಕ್ ಕಾಮುಕನ ಬಂಧನ! - Bangaluru crime news

ಅಪ್ರಾಪ್ತ ಹೆಣ್ಣುಮಕ್ಕಳು ಹಾಗೂ ಯುವತಿಯನ್ನೇ ಟಾರ್ಗೆಟ್​ ಮಾಡಿಕೊಂಡು ಬೆತ್ತಲೆ ಫೋಟೋಗೆ ಬೇಡಿಕೆ ಇಡುತ್ತಿದ್ದ ಬೇವಕೂಫನನ್ನು ವೈಟ್ ಫೀಲ್ಡ್ ಸೈಬರ್​ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

Arrest of the accused who demanded young women naked photo
ಬಂಧಿತ ಆರೋಪಿ ಜಗದೀಶ್

By

Published : Oct 13, 2020, 4:47 PM IST

ಬೆಂಗಳೂರು:ಅಪ್ರಾಪ್ತ ಹೆಣ್ಣು ಮಕ್ಕಳಿಗೆ ಫೋನ್​ ಮಾಡಿ ಬೆತ್ತಲೆ ಫೋಟೋ ಕಳಿಸುವಂತೆ ಕಿರುಕುಳ ನೀಡುತ್ತಿದ್ದ ಕಾಮುಕನೊಬ್ಬನನ್ನು ವೈಟ್ ಫೀಲ್ಡ್ ಸೈಬರ್​ ಠಾಣೆಯ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಕಾಡುಗೋಡಿ ನಿವಾಸಿ ಜಗದೀಶ್ ಬಂಧಿತ ಆರೋಪಿ ಎಂದು ತಿಳಿದು ಬಂದಿದೆ.

ಅಪ್ರಾಪ್ತ ಹೆಣ್ಣು ಮಕ್ಕಳು ಹಾಗೂ ಯುವತಿಯನ್ನೇ ಟಾರ್ಗೆಟ್​ ಮಾಡಿಕೊಂಡಿದ್ದ ಬಂಧಿತ ಜಗದೀಶ್, ಅವರ ಹೆಸರಿಲ್ಲಿ ನಕಲಿ ಇನ್​​​ಸ್ಟಾಗ್ರಾಂ ಖಾತೆ ತೆರೆದು ಚಾಟಿಂಗ್​ ಮಾಡುತ್ತಿದ್ದ. ಈತನ ಈ ಮೋಸದಾಟದ ಬಲೆಗೆ ಬಿದ್ದವರಿಗೆ ಬೆತ್ತಲೆ ಫೋಟೋ ಕಳಿಸುವಂತೆ ಡಿಮ್ಯಾಂಡ್ ಮಾಡುತ್ತಿದ್ದ. ಫೋಟೋ ಕಳಿಸದಿದ್ದರೆ ಅಪ್ರಾಪ್ತೆಯರ ಹೆಸರಿನಲ್ಲಿ ನಕಲಿ ಅಕೌಂಟ್ ತೆರೆದು I’m available ಎಂದು ಪೋಸ್ಟ್​ ಜೊತೆಗೆ ತನ್ನ ಮೊಬೈಲ್​ ನಂಬರ್​ ಹಾಕುತ್ತಿದ್ದನು.

ಬಂಧಿತ ಆರೋಪಿ ಜಗದೀಶ್

ಇಂತಹ ಕಿರುಕುಳದವನ್ನು ಇಷ್ಟಕ್ಕೆ ನಿಲ್ಲಿಸದ ಜಗದೀಶ್, ಅಪ್ರಾಪ್ತೆ ಹಾಗೂ ಯುವತಿಯರ ಅರೆ ಬರೆ ಬೆತ್ತಲೆ ಫೋಟೋ ಹಾಕಿ ಬಿಂಬಿಸಿ ಬಲೆಗೆ ಬಿದ್ದವರಿಗೆ ಇಂತಹದ್ದೇ ಫೋಟೋ ಕಳುಹಿಸುವಂತೆ ವಿವಿಧ ನಂಬರ್​​ಗಳಿಂದ ಮೆಸೇಜ್ ಮಾಡುತ್ತಿದ್ದನು. ಹೀಗೆ ವೈಟ್ ಫೀಲ್ಡ್​ನ ಅಪ್ರಾಪ್ತೆಯೊಬ್ಬಳಿಗೆ ನಕಲಿ ಇನ್​​​​​ಸ್ಟಾಗ್ರಾಂ ಖಾತೆ ತೆರೆದು ಕಿರುಕುಳ ನೀಡಿದ್ದನು. ಇವನ ಕಾಟದಿಂದ ಬೇಸತ್ತ ಅಪ್ರಾಪ್ತೆ ತನ್ನ ಪೋಷಕರಿಗೆ ತಿಳಿಸಿದ್ದಳು.

ತಕ್ಷಣ ಅಲರ್ಟ್​ ಆದ ಪೋಷಕರು ವೈಟ್ ಫೀಲ್ಡ್ ಸೈಬರ್​ ಠಾಣೆಗೆ ಆಗಮಿಸಿ ಈ ಬಗ್ಗೆ ದೂರು ನೀಡಿದ್ದರು. ಆರೋಪಿ ವಿರುದ್ಧ ಒಂದೇ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾದ ಕಾರಣ ಕಾಮುಕನ ಪತ್ತೆಗಾಗಿ ವಿಶೇಷ ತಂಡವೊಂದನ್ನು ರಚಿಸಲಾಗಿತ್ತು. ತನಿಖೆಯಿಂದ ಜಗದೀಶ್ ಕೊನೆಗೂ ಸಿಕ್ಕಿಬಿದ್ದಿದ್ದು, ಇದೀಗ ಜೈಲು ಕಂಬಿ ಎಣಿಸುತ್ತಿದ್ದಾನೆ. ಆರೋಪಿಯ ಮೊಬೈಲ್ ವಶಕ್ಕೆ ಪಡೆದ ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ.

ABOUT THE AUTHOR

...view details