ಕರ್ನಾಟಕ

karnataka

ETV Bharat / state

​​​​​​​ಬೆಂಗಳೂರಲ್ಲಿ 1 ಕೆಜಿ ಚಿನ್ನ ಪಡೆದು ಪರಾರಿಯಾಗಿದ್ದ ಆರೋಪಿ ಮಹಾರಾಷ್ಟ್ರದಲ್ಲಿ ಸಿಕ್ಕಿಬಿದ್ದ - ಬೆಂಗಳೂರಿನ ಅಂಗಡಿಯಿಂದ ಚಿನ್ನ ದೋಚಿದ್ದ ಆರೋಪಿ ಬಂಧನ

ಬೆಂಗಳೂರಿನ ದಿ ಸನ್ ಸ್ಮರ್ ಎಂಟರ್​ಪ್ರೈಸಸ್​​ ಅಂಗಡಿಯಲ್ಲಿ 1 ಕೆ.ಜಿ ಗಟ್ಟಿ ಚಿನ್ನ ಪಡೆದು ಪರಾರಿಯಾಗಿದ್ದ ಆರೋಪಿ ಸೂರಜ್ ಅನ್ನು ಮಹಾರಾಷ್ಟ್ರದ ಸತಾರಾದಲ್ಲಿ ಬಂಧಿಸಲಾಗಿದೆ. ಈತನಿಂದ 900 ಗ್ರಾಂ ಚಿನ್ನವನ್ನು ಹಲಸೂರು ಗೇಟ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗಟ್ಟಿ ಚಿನ್ನ ದೋಚಿದ್ದ ಆರೋಪಿ ಬಂಧನ

By

Published : Oct 22, 2019, 9:39 AM IST

ಬೆಂಗಳೂರು: ಇಲ್ಲಿನ ಹಲಸೂರುಗೇಟ್ ಠಾಣಾ ವ್ಯಾಪ್ತಿಗೆ ಬರುವ ದಿ ಸನ್ ಸ್ಮರ್ ಎಂಟರ್​ಪ್ರೈಸಸ್​​ ಅಂಗಡಿಯಿಂದ ಸುಮಾರು 1 ಕೆಜಿ ಚಿನ್ನದ ಗಟ್ಟಿಯನ್ನು ಪಡೆದು, ಹಣ ನೀಡುವುದಾಗಿ ನಂಬಿಸಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಗಟ್ಟಿ ಚಿನ್ನ ದೋಚಿದ್ದ ಆರೋಪಿ ಬಂಧನ

ಮಹಾರಾಷ್ಟ್ರ ಸತಾರಾ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದ ಸೂರಜ್ ಸದಾಶಿವ (31) ಬಂಧಿತ ಆರೋಪಿ. ಈತನಿಂದ 900 ಗ್ರಾಂ ಗಟ್ಟಿ ಚಿನ್ನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಐಪಿಸಿ ಸೆಕ್ಷನ್ 420, 406ರ ಅಡಿ ಈತನನ್ನು ಬಂಧಿಸಲಾಗಿದೆ.

ಹಲಸೂರು ಗೇಟ್ ಪೊಲೀಸ್ ಠಾಣೆ ಇನ್​ಸ್ಪೆಕ್ಟರ್ ಹರ್ಷವರ್ಧನ್ ಹಾಗೂ ಸಿಬ್ಬಂದಿಯ ಸೇರಿದಂತೆ ವಿಶೇಷ ತಂಡ ರಚಿಸಿ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿತ್ತು.

For All Latest Updates

TAGGED:

ABOUT THE AUTHOR

...view details